ಅಜ್ಜಾವರದ ಚೈತನ್ಯ ಸೇವಾಶ್ರಮದಲ್ಲಿ ಗುರುಪೂಜೆ ಆಚರಣೆ
ಅಧುನಿಕ ಕಾಲಘಟ್ಟದಲ್ಲಿ ಗುರುಪರಂಪರೆ ನಶಿಸಿ ಹೋಗುತ್ತಿದ್ದು, ಇದನ್ನು ಉಳಿಸಿ ಬೆಳೆಸುವ ಅಗತ್ಯ ಇದೆ ಎಂದು ಅಜ್ಜಾವರ ಚೈತನ್ಯ ಸೇವಾಶ್ರಮದ ಶ್ರೀ ಸ್ವಾಮಿ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.










ಅವರು ತಮ್ಮ ಆಶ್ರಮದಲ್ಲಿ ಗುರುಪೂಜೆ ಆಚರಣೆ ಮತ್ತು ತಾವು ಬರೆದ ಕೃತಿ ”ಕರ್ಮ ಶುದ್ಧಿಯಿಂದ ಜನ್ಮ ಶುದ್ಧಿಯಾಗುವುದು’ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾಮೀಜಿಯವರ ಕೃತಿಯನ್ನು ಬಿಡುಡೆಗೊಳಿಸಿ ಮಾತನಾಡಿದ ಸುಳ್ಯ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರೋಪೆಸರ್ ಡಾ.ಹರ್ಷವರ್ಧನ ಮಾತನಾಡಿ ಹಿಂದಿನ ಕಾಲದಲ್ಲಿ ಗುರುಕುಲದಲ್ಲಿ ಶಿಕ್ಷಣ ಪಡೆಯಲಾಗುತ್ತಿತ್ತು. ಅಲ್ಲಿಯೇ ಧಾರ್ಮಿಕ ಶಿಕ್ಷಣ ಶೈಕ್ಷಣಿಕ ಶಿಕ್ಷಣ ದೊರೆಯುತ್ತಿದ್ದವು. ಆದರೆ ಈಗ ಧಾರ್ಮಿಕ ಶಿಕ್ಷಣ ಮತ್ತು ಜೀವನ ನಿರ್ವಹಣೆಗೆ ಬೇಕಾದ ಶಿಕ್ಷವನ್ನು ಬೇರೆ ಬೇರೆ ಕಡೆ ಪಡೆಯುವ ಅನಿವಾರ್ಯತೆ ಎದುರಾಗಿದೆ. ಪ್ರತಿಯೊಬ್ಬರಲ್ಲಿ ನಾವು ಕಲಿಯುವ ವಿಷಯಗಳು ಇವೆ. ಆದುದರಿಂದ ಪ್ರತಿಯೊಬ್ಬರು ಗುರುಗಳು ಎಂದು ಹೇಳಿದರು.
ನಿವೃತ್ತ ಎ.ಎಸ್.ಐ ಕುಶಾಲಪ್ಪ ಗೌಡ ಅತ್ಯಾಡಿ, ಡಾ.ಸಾಯಿಗೀತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶಿಕ್ಷಕಿ ಸುನಂದ ಸ್ವಾಗತಿಸಿ, ವಂದಿಸಿದರು. ಆಶ್ರಮದ ಟ್ರಸ್ಟಿ ಪ್ರಣವಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಮೇಘಶ್ಯಾಮ್ ಅಡ್ಪಂಗಾಯ ಮತ್ತು ಇತರರು ಉಪಸ್ಥಿತರಿದ್ದರು. ಬೆಳಿಗ್ಗೆ ಗುರುಪೂಜೆ ನಡೆಯಿತು.










