ಎಡಮಂಗಲ : ಆರೋಗ್ಯ ಕ್ಯಾಂಪ್

0

ಸ್ನೇಹ ಸಂಜೀವಿನಿ ಗ್ರಾ.ಪಂ.ಮಟ್ಟದ ಒಕ್ಕೂಟದಿಂದ ಎಡಮಂಗಲ ಗ್ರಾ.ಪ ಸಭಾಂಗಣದಲ್ಲಿ ಆರೋಗ್ಯ ಕ್ಯಾಂಪ್ ನ್ನು ಜುಲೈ 11 ರಂದು ನಡೆಸಲಾಯಿತು. ಕ್ಯಾಂಪ್ ಮೂಲಕ ಮಹಿಳಾ ಹಾಗೂ ಪುರುಷ ಗ್ರಾಮಸ್ಥರ ಬಿಪಿ ಹಾಗು ಶುಗರ್ ಪರೀಕ್ಷೆ ಮಾಡಲಾಯಿತು. ಸಿಎಚ್ಒ ಧನುಶ್ರೀ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ನಂತರ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ನಿಶಾ ಪ್ರಿಯ ಇವರು ಲಿಂಗಾಧಾರಿತ ದೌರ್ಜನ್ಯ ಕುರಿತು, ಹರಿಹರೆಯದ ಕಿಶೋರರ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳ ಬಗ್ಗೆ, ಮಕ್ಕಳನ್ನು ಉತ್ತಮವಾಗಿಸುವಲ್ಲಿ ಪೋಷಕರು ಗಮನಹರಿಸಬೇಕಾದ ವಿಷಯಗಳ ಬಗ್ಗೆ, ಅದೇ ರೀತಿ ಮುಟ್ಟಿನ ಕಪ್ ಬಳಕೆ ಹಾಗೂ ಅದರ ಪ್ರಯೋಜನಗಳ ಬಗ್ಗೆ, ಪರಿಸರ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಘನ ತ್ಯಾಜ್ಯ ಘಟಕದ ಪಾತ್ರ ಹಾಗೂ ಸಾರ್ವಜನಿಕರ ಕರ್ತವ್ಯ ಇವುಗಳ ಬಗ್ಗೆ ಮಾಹಿತಿ ನೀಡಲಾಯಿತು.
ಪಂಜ ವಲಯ ಕೃಷಿ ಇಲಾಖೆ ಸ್ಮಿತಾ ಇವರಿಂದ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಇಕೆವೈಸಿ ಮಾಡಲಾಯಿತು. ಹಾಗೂ ಸಭೆಯಲ್ಲಿ ಕೃಷಿ ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
BRP PRI ಧನ್ಯ, ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಂಚಾಯಿತಿ ಸದಸ್ಯರು ಸಂಜೀವಿನಿ ಸದಸ್ಯರು ಆಶಾ ಕಾರ್ಯಕರ್ತೆಯರು ಒಕ್ಕೂಟದ ಸಿಬ್ಬಂದಿಗಳು ಹಾಜರಿದ್ದರು.
ಭವ್ಯ ಸ್ವಾಗತಿಸಿ, ಸಾವಿತ್ರಿ ವಂದಿಸಿದರು.