ಸುಳ್ಯದ ಮುಳಿಯ ಜ್ಯುವೆಲ್ಲರ್ಸ್ ನಲ್ಲಿ ಚಿನ್ನದ ಆಭರಣಗಳ ಮಜೂರಿ ಮೇಲೆ ಶೇ.50 ರಿಯಾಯಿತಿ – ಭರದಿಂದ ಚಿನ್ನ ಖರೀದಿಸುತ್ತಿರುವ ಗ್ರಾಹಕರು

0

ಸುಳ್ಯದ ಮುಖ್ಯ ರಸ್ತೆ ಕೊಯಿಂಗೋಡಿ ಕಾಂಪ್ಲೆಕ್ಸ್ ನಲ್ಲಿರುವ ಪ್ರಸಿದ್ಧ ಚಿನ್ನಾಭರಣಗಳಿಗೆ ಮಳಿಗೆ ಮುಳಿಯ ಜ್ಯುವೆಲ್ಲರ್ಸ್ ನಲ್ಲಿ ಗ್ರಾಹಕರಿಗೆ ಚಿನ್ನ ಖರೀದಿಗೆ ವಿಶೇಷ ರಿಯಾಯಿತಿ ನೀಡಲಾಗಿದ್ದು ನೂರಾರು ಗ್ರಾಹಕರು ಭರದಿಂದ ಚಿನ್ನ ಖರೀದಿಸುತ್ತಿದ್ದಾರೆ.

ಚಿನ್ನದ ಆಭರಣಗಳ ಮಜೂರಿ ಮೇಲೆ ಶೇ.50 ರಷ್ಟು ರಿಯಾಯಿತಿ ನೀಡಲಾಗಿದ್ದು ಚಿನ್ನದ ಆಭರಣ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.

ಈ ರಿಯಾಯಿತಿ ಜೂನ್.30 ರಿಂದಲೇ ಪ್ರಾರಂಭಗೊಂಡಿದ್ದು ಪ್ರತೀ ದಿನ ಜನರು ವಿವಿಧ ವಿನ್ಯಾಸದ ಚಿನ್ನಾಭರಣಗಳನ್ನು ಖರೀದಿಸುತ್ತಿದ್ದಾರೆ. ಈ ರಿಯಾಯಿತಿ ಜುಲೈ 30 ರವರೆಗೆ ಇರಲಿದೆ.

ಕಳೆದ 33 ವರ್ಷಗಳಿಂದ ಸುಳ್ಯದಲ್ಲಿ ಚಿನ್ನಾಭರಣ ಮಳಿಗೆಗಳನ್ನು ಪ್ರಾರಂಭಿಸಿ ಗ್ರಾಹಕರ ಪ್ರೀತಿ ,ವಿಶ್ವಾಸ ಹಾಗೂ ನಿರಂತರ ಪ್ರೋತ್ಸಾಹದಿಂದ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಮಳಿಗೆಯಾಗಿದ್ದು ಇದೀಗ ಗ್ರಾಹಕರಿಗೆ ಅನುಕೂಲವಾಗುವಂತೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.
ಮಳಿಗೆಯ ಹಿಂಬದಿಯಲ್ಲಿ ಗ್ರಾಹಕರಿಗೆ ವಾಹನ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಲಾಗಿದೆ.
ವಿಶಾಲವಾದ ಮಳಿಗೆಯಲ್ಲಿ ಗ್ರಾಹಕರಿಗೆ ಚಿನ್ನಾಭರಣ ಖರೀದಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದ್ದು ಗ್ರಾಹಕರು ತಮಗಿಷ್ಟವಾದ ಚಿನ್ನಾಭರಣಗಳನ್ನು ಖರೀದಿಸಬಹುದು ಎಂದು ಮಾಲಕರು ತಿಳಿಸಿದ್ದಾರೆ.