ಅಧ್ಯಕ್ಷರಾಗಿ ಸವಣೂರು ಸೀತಾರಾಮ ರೈ ಆಯ್ಕೆ
2025ರ ಡಿಸೆಂಬರ್ ನಲ್ಲಿ ಅಮೃತಮಹೋತ್ಸವ ಆಚರಣೆಗೆ ನಿರ್ಧಾರ
ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ ೨೦೨೫ ಜೂ.೧೯ರಂದು ೭೫ ವರ್ಷ ತುಂಬಿದ ಪ್ರಯುಕ್ತ ಅಮೃತಮಹೋತ್ಸವ ಕಾರ್ಯಕ್ರಮ ಆಚರಿಸುವ ಉzಶದಿಂದ ಜೂ.೧೨ರಂದು ಪೂರ್ವಭಾವಿ ಸಭೆಯು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಅಮೃತಮಹೋತ್ಸವ ಸಮಿತಿಯನ್ನು ರಚನೆ ಮಾಡಲಾಗಿದ್ದು, ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈಯವರು ಅಧ್ಯಕ್ಷರಾಗಿ ಆಯ್ಕೆಯಾದರು. ೨೦೨೫ರ ಡಿಸೆಂಬರ್ ತಿಂಗಳಲ್ಲಿ ಕಾರ್ಯಕ್ರಮ ಆಯೋಜಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಗಿದೆ.















ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಡೇವಿಡ್ ದೀರಾ ಕ್ರಾಸ್ತ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸುಳ್ಯ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ತಾ.ಪಂ. ಇ.ಒ. ರಾಜಣ್ಣ, ಜನಾರ್ದನ ಮಾಸ್ಟರ್ ಗಣಿತ ಅಧ್ಯಯನ ಕೇಂದ್ರದ ಅಧ್ಯಕ್ಷ ಎಂ.ಬಿ.ಸದಾಶಿವ, ಕಾಲೇಜು ಅಭಿವೃದ್ಧಿ ಸಮಿತಿಯ ಲಿಂಗಪ್ಪ ಗೌಡ ಕೇರ್ಪಳ, ಪ್ರೌಢಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಮಂಜುಳಾ ಬಡಿಗೇರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ವೇದಿಕೆಯಲ್ಲಿ ಇದ್ದರು.
ಸಮಿತಿ ರಚನೆ
ಸಭೆಯಲ್ಲಿ ಅಮೃತಮಹೋತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಸೀತಾರಾಮ ರೈ ಸವಣೂರು, ಉಪಾಧ್ಯಕ್ಷರಾಗಿ ಲಿಂಗಪ್ಪ ಗೌಡ ಕೇರ್ಪಳ, ಮಂಜುಳಾ ಬಡಿಗೇರ್, ಸುಧಾಕರ ರೈ ಪಿ.ಬಿ., ಡಾ| ರಂಗಯ್ಯ, ಗಿರೀಶ್ ಡಿ.ಎಸ್., ಪ್ರಧಾನ ಕಾರ್ಯದರ್ಶಿಯಾಗಿ ಎಂ.ಬಿ.ಸದಾಶಿವ, ಜತೆ ಕಾರ್ಯದರ್ಶಿಯಾಗಿ ದಿನೇಶ್ ಮಡಪ್ಪಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಎಂ. ಮುಸ್ತಫಾ, ಕೋಶಾಧಿಕಾರಿಯಾಗಿ ಅಶೋಕ್ ಪ್ರಭು, ಸಹಾಯಕ ಕೋಶಾಧಿಕಾರಿಯಾಗಿ ರಾಮಚಂದ್ರ ಪಲ್ಲತಡ್ಕ, ಸಂಚಾಲಕರುಗಳಾಗಿ ಮೋಹನ್ ಗೌಡ ಬೊಮ್ಮೆಟ್ಟಿ, ಪ್ರಕಾಶ್ ಮೂಡಿತ್ತಾಯ, ಸಮಿತಿ ಸದಸ್ಯರುಗಳಾಗಿ ಲೋಕಯ್ಯ ಗೌಡ ಅತ್ಯಾಡಿ, ಚಂದ್ರಶೇಖರ ಪೇರಾಲು, ಕೇಶವ ಸಿ.ಎ., ಡೇವಿಡ್ ಧೀರಾ ಕ್ರಾಸ್ತ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಶಶಿಧರ್ ಪಡ್ಪು, ಡಾ| ಎನ್.ಎ.ಜ್ಞಾನೇಶ್, ಪಿ.ಎ.ಮಹಮ್ಮದ್, ವಿಜಯಕುಮಾರ್ ಉಬರಡ್ಕ, ನವೀನ್ ಸೋಮಯಾಗಿ,ಬಾಪು ಸಾಹೇಬ್ ಅರಂಬೂರು, ರೇಖಾ, ಪಿ.ಎ. ಮಹಮ್ಮದ್ ಶಿಕ್ಷಕ ಪ್ರತಿನಿಧಿಗಳಾಗಿ ಕೃಷ್ಣ ಹಾಗು ಡಾ| ಸುಂದರ ಕೇನಾಜೆಯವರನ್ನು ಸಮಿತಿಗೆ ಆಯ್ಕೆ ಮಾಡಲಾಯಿತು.
ಜು.೨೬ರಂದು ಮಧ್ಯಾಹ್ನ ಈ ಸಮಿತಿಯವರು ಸಭೆ ಸೇರಿ ಅಮೃತಮಹೋತ್ಸವ ಉಪ ಸಮಿತಿಗಳ ರಚನೆ ಹಾಗೂ ಕಾರ್ಯಕ್ರಮ ಆಯೋಜನೆ ಕುರಿತು ಚರ್ಚಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು. ಕಾಲೇಜು ವಠಾರದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಸಭೆಯಲ್ಲಿ ಚರ್ಚೆಗಳು ನಡೆದವು.
ಕಾಲೇಜಿನ ಪ್ರಾಂಶುಪಾಲ ಮೋಹನ್ ಗೌಡ ಬೊಮ್ಮೆಟ್ಟಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ವಂದಿಸಿದರು. ಶಿಕ್ಷಕಿ ಪೂರ್ಣಿಮಾ ಟಿ ಕಾರ್ಯಕ್ರಮ ನಿರ್ವಹಿಸಿದರು.










