
ಸುಳ್ಯದ ಕುರುಂಜಿಭಾಗ್ನಲ್ಲಿರುವ ಕೀರ್ತನ ಟವರ್ನಲ್ಲಿ ಡಾ. ಅನುರಾಧಾರವರ ಮಾಲಕತ್ವದ ಡಾ. ಅನುರಾಧಾ ಫಿಸಿಯೋಥೆರಪಿ ಕ್ಲಿನಿಕ್ ಇಂದು (ಜು. ೧೪ರಂದು) ಶುಭಾರಂಭಗೊಂಡಿತು.
ಸುಳ್ಯ ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಸುಳ್ಯ ಉದ್ಯಾನವನ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಸಾಯಿಗೀತಾ ಜ್ಞಾನೇಶ್, ನಿವೃತ್ತ ವೈದ್ಯಾಧಿಕಾರಿ ಡಾ. ರಂಗಯ್ಯ, ಸುಳ್ಯ ತಾ. ಯಾದವ ಸಭಾ ಅಧ್ಯಕ್ಷ ಕುರಣಾಕರ ಹಾಸ್ಪಾರೆ, ಕೀರ್ತನ್ ಟವರ್ ಮಾಲಕ ದಾಮೋದರ ನಾರ್ಕೋಡು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಯಾದವ ಸಭಾ ಕೇಂದ್ರ ಸಮಿತಿ ಅಧ್ಯಕ್ಷ ಎ.ಕೆ. ಮಣಿಯಾಣಿ, ಶ್ರೀಮತಿ ಗೀತಾ ಸುಧಾಮ ಆಲೆಟ್ಟಿ, ಉದಯ ಮುಂದಕಾಡು ಇದ್ದರು.
















ಸುಧಾಮ ಆಲೆಟ್ಟಿ ಸ್ವಾಗತಿಸಿ, ಉದಯರವರು ವಂದಿಸಿದರು. ವಿ.ಜೆ. ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.











