ಸುಳ್ಯ ತಾಲೂಕು ಆಸ್ಪತ್ರೆ ಆಡಳಿತ ವ್ಯೆದಾಧಿಕಾರಿಯಾಗಿದ್ಸು, ಪುತ್ತೂರು ಆಸ್ಪತ್ರೆಗೆ ವರ್ಗಾವಣೆಗೊಂಡ ಡಾ. ಕರುಣಾಕರ ಕೆ.ವಿ. ಅವರಿಗೆ ಸುಳ್ಯ ತಾಲೂಕು ಆಸ್ಪತ್ರೆ ಅರೋಗ್ಯ ರಕ್ಷಾ ಸಮಿತಿ ವತಿಯಿಂದ ಬೀಳ್ಕೊಡುಗೆ ಸಮಾರಂಭ ಜು.14ರಂದು ನಡೆಯಿತು.









ಸುಳ್ಯ ವಿಧಾನ ಸಭಾ ಕ್ಷೇತ್ರ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್, ಟಿ ಎ ಪಿ ಸಿ ಎಂ ಸ್ ಉಪಾಧ್ಯಕ್ಷ ಪಿ.ಎಸ್. ಗಂಗಾಧರ, ನ್ಯಾಯವಾದಿ ದಿನೇಶ್ ಮಡಪ್ಪಾಡಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ ಎಂ ಮುಸ್ತಫಾ, ಅರೋಗ್ಯ ರಕ್ಷಾ ಸಮೀತಿ ಸದಸ್ಯರಾದ ಶಹೀದ್ ಪಾರೆ, ಚಂದ್ರನ್ ಕುಟೆಲ್, ಅಬ್ದುಲ್ ರಝಕ್, ವಿಜಯ ಜಯರಾಮ ರಾಧಾಕೃಷ್ಣ ಪಾರಿವಾರಕನ, ಸುರೇಶ ಕಾಮತ್, ಸಂಜೀವ ಬಡ್ಡೇಕಲ್ಲು, ಆಡಳಿತ ವ್ಯೆದಾಧಿಕಾರಿ ಶಿವಕುಮಾರ, ನವೀನ್ ಚಂದ್ರ ಆಸ್ಪತ್ರೆ ವೈದಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಮೊದಲಾದವರು ಉಪಸ್ಥಿತರಿದ್ದರು. ತಾಲೂಕು ಆಸ್ಪತ್ರೆ ಅರೋಗ್ಯ ಮಿತ್ರ ಮುರಳಿ ನಳಿಯಾರು ಕಾರ್ಯಕ್ರಮ ನಿರೂಪಿಸಿದರು










