ಪಂಜ ಸಮೀಪದ ಕರಿಕ್ಕಳದಲ್ಲಿ ಅಂಗಡಿಗೆ ನುಗ್ಗಿ ಹಣ ಕಳ್ಳತನ-ಆರೋಪಿ ಪೊಲೀಸ್ ವಶ

0

ಪಂಜ ಕರಿಕ್ಕಳದಲ್ಲಿರವ ಜತ್ತಪ್ಪ ಗೌಡ ಮೇಲ್ಮನೆ ರವರ ಅಂಗಡಿಯಲ್ಲಿ ಜು.9 ರಂದು ರಾತ್ರಿ ಸುಮಾರು 25 ಸಾವಿರ ನಗದು ಕಳ್ಳತನ ಆಗಿತ್ತು. ಅಂದು ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರಿಗೆ ಪ್ರಮುಖ ಸಾಕ್ಷಿ ದೊರೆತಿದ್ದು ಜು.15 ರಂದು ಕೈಕಂಬ ಸಮೀಪ ಕುಂಪದವು ಗಣೇಶ್ ಎಂಬಾತನನ್ನು ವಶಕ್ಕೆ ಪಡೆದು ಸುಬ್ರಹ್ಮಣ್ಯ ಠಾಣೆಗೆ ಕರೆ ತರಲಾಗಿದ್ದು ತನಿಖೆ ನಡೆಯುತ್ತಿದೆ. ಈ ಹಿಂದೆ ಆರೋಪಿ ಕರಿಕಳದಲ್ಲಿ ಕೆಲಸಕ್ಕೆ ಬಂದಿದ್ದ ಈ ವೇಳೆ ಅಂಗಡಿಗೆ
ಬಗ್ಗೆ ಮಾಹಿತಿ ದೊರೆತಿತ್ತು ಎನ್ನಲಾಗಿದೆ.