ದ್ವಿಚಕ್ರ ವಾಹನ ಸವಾರರಿಗೆ ಅಪಾಯದ ಮುನ್ಸೂಚನೆ
ಇತ್ತೀಚೆಗೆ ನಗರದಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ರಸ್ತೆಯಲ್ಲಿ ತೆಗೆದಿರುವ ಕಣಿ ಗಳಿಗೆ ತಾತ್ಕಾಲಿಕ ದುರಸ್ಥಿ ಕಾರ್ಯ ನಡೆಯುತ್ತಿದೆ.








ಆದರೆ ರಸ್ತೆ ಗುಂಡಿ ಮುಚ್ಚಲು ಕೆಲವೆಡೆ ಬರೇ ಜಲ್ಲಿಕಲ್ಲುಗಳನ್ನು ತಂದು ಹಾಕಿದ್ದು ಬಳಿಕ ಅತ್ತಕಡೆ ಗಮನ ಕೂಡ ನೀಡದೆ ಹಾಗೇನೇ ಬಿಟ್ಟು ಹೋಗಿರುತ್ತಾರೆ.
ಇದೀಗ ಹಾಕಿರುವ ಜಲ್ಲಿಕಲ್ಲುಗಳು ವಾಹನಗಳ ಸಂಚಾರದಿಂದ ಅಕ್ಕ ಪಕ್ಕದಲ್ಲಿ ಚಲ್ಲಾಪಿಲ್ಲಿ ಯಾಗಿದ್ದು ದ್ವಿಚಕ್ರ ವಾಹನ ಸವಾರರಿಗೆ ಆತಂಕ ತಂದಿದೆ.
ಈ ಬಗ್ಗೆ ಎಷ್ಟೇ ವರದಿಗಳು ಬಿತ್ತರಗೊಂಡರು ಕೂಡ ಇದನ್ನು ಲೆಕ್ಕಿಸದ ಸಂಬಂಧಪಟ್ಟವರು ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.










