ರೆಂಜಾಳ : ಸಾರ್ವಜನಿಕ “ಶ್ರೀ ವರಮಹಾಲಕ್ಷ್ಮೀ ” ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

0

ಜು.8ರಂದು ಶ್ರೀ ಕ್ಷೇತ್ರ ರೆಂಜಾಳದಲ್ಲಿ ನಡೆಯಲಿರುವ ಸಾರ್ವಜನಿಕ “ಶ್ರೀ ವರಮಹಾಲಕ್ಷ್ಮೀ ” ಪೂಜೆಯ ಆಮಂತ್ರಣ ಪತ್ರಿಕೆಯನ್ನು ಇಂದು ಬೆಳಿಗ್ಗೆ ಶ್ರೀ ಕ್ಷೇತ್ರ ರೆಂಜಾಳ “ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ” ದೇವಾಲಯದಲ್ಲಿ ಬಿಡುಗಡೆ ಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸಂಪಾಜೆ ವಲಯ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಜಗನ್ಮೋಹನ ರೈ ರೆಂಜಾಳ, ಜನಜಾಗೃತಿ ವೇದಿಕೆ ಮರ್ಕಂಜ ಗ್ರಾಮ ಸಮಿತಿ ಅಧ್ಯಕ್ಷರಾದ ಸತೀಶ್‌ ರಾವ್ ದಾಸರಬೈಲು, 2025 ನೇ ಸಾಲಿನ ವರಮಹಾಲಕ್ಷ್ಮಿ ಪೂಜೆಯ ಅಧ್ಯಕ್ಷರಾದ ಸರಸ್ವತಿ ಕಕ್ಕಾಡು, ಮರ್ಕಂಜ ಗ್ರಾಮದ ಸೇವಾ ಪ್ರತಿನಿಧಿ ರೋಹಿಣಿ ಅಂಗಡಿಮಜಲು, ಒಕ್ಕೂಟ ಅಧ್ಯಕ್ಷರಾದ ರಾಧಾಕೃಷ್ಣ ಗೌಡ ಅಂಗಡಿಮಜಲು,ಪಂಚಸ್ಥಾಪನೆಯ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಣ್ಣು ಕಟ್ಟಕೋಡಿ, ನಿಕಟಪೂರ್ವ ಸೇವಾ ಪ್ರತಿನಿಧಿ ನಿತ್ಯಾನಂದ ಭೀಮಗುಳಿ, ಮರ್ಕಂಜ ಒಕ್ಕೂಟ ಪಧಾಧಿಕಾರಿಗಳಾದ ನವೀನ ಕಬ್ಬಿನಡ್ಕ, ರಾಜೇಂದ್ರ ಕುಮಾರ್ ಜೈನ್,
ಶಿವ ಪಂಚಾಕ್ಷರಿ ಭಜನಾ ಮಂಡಳಿ ಸದಸ್ಯರಾದ ಮಂಜುನಾಥ ರೈ ರೆಂಜಾಳ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಂಪಾಜೆ ವಲಯ ಇದರ ಕಾರ್ಯಧರ್ಶಿ ನಾರಾಯಣ ನಾಯ್ಕ
ಅಜ್ಜಿಕಲ್ಲು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.