ಪದ್ಮಾವತಿ ನೆಟ್ಟಾರು ನಿಧನ

0

ನೆಟ್ಟಾರು ದಿ. ಹನುಮ ಶೆಟ್ಟಿಯವರ ಧರ್ಮಪತ್ನಿ ಶ್ರೀಮತಿ ಪದ್ಮಾವತಿ ನೆಟ್ಟಾರುರವರು ಜು. 17ರಂದು ಪುತ್ರ ಸೀತಾರಾಮ ಶೆಟ್ಟಿಯವರ ಮನೆ ಮೊಗಪ್ಪೆಯಲ್ಲಿ ನಿಧನರಾದರು. ಇವರಿಗೆ 98 ವರ್ಷ ವಯಸ್ಸಾಗಿತ್ತು.


ಮೃತರು ಪುತ್ರರಾದ ನಿವೃತ್ತ ವಿಜಯಾ ಬ್ಯಾಂಕ್‌ ಪ್ರಬಂಧಕ ಬಾಲಕೃಷ್ಣ ಶೆಟ್ಟಿ, ಸುಳ್ಯದಲ್ಲಿ ಸೀಮಾ ಆರ್ಟ್ಸ್ ನಡೆಸುತ್ತಿದ್ದ ಸೀತಾರಾಮ ಶೆಟ್ಟಿ, ನಿವೃತ್ತ ಅಂಚೆ ಮೇಲ್ವಿಚಾರಕರಾದ ದೇವದಾಸ ಶೆಟ್ಟಿ, ಬೆಂಗಳೂರಿನಲ್ಲಿ ನ್ಯಾಯವಾದಿಯಾಗಿರುವ ಮೋಹನ್ ದಾಸ್ ಶೆಟ್ಟಿ, ಪುತ್ರಿಯರಾದ ಶ್ರೀಮತಿ ಸರೋಜಿನಿ ಮೂಡಿಗೆರೆ, ಶ್ರೀಮತಿ ನಾಗವೇಣಿ ಬೆಂಗಳೂರು ಸೇರಿದಂತೆ ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.