








ಜು.17 ರಂದು ಜಿಲ್ಲಾ ಪಂಚಾಯತ್, ಲೀಡ್ ಬ್ಯಾಂಕ್., ಗ್ರಾಮ ಪಂಚಾಯತ್ ಕನಕಮಜಲು ಹಾಗೂ ಕೆನರಾಬ್ಯಾಂಕ್ ಜಾಲ್ಸೂರು ಶಾಖೆ ಇವರ ಸಹಭಾಗಿತ್ವದಲ್ಲಿ ” ಜನಸುರಕ್ಷಾ ಅಭಿಯಾನ 2025-26″ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಸಲಾಯಿತು ಈ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ” ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಹಾಗು ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆ” ಬಗ್ಗೆ ಮಾಹಿತಿ ಕಾರ್ಯಕ್ರಮ ಹಾಗು ನೋಂದಣಿ ಅಭಿಯಾನ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾ. ಪಂ. ಅಧ್ಯಕ್ಷರಾದ ಶ್ರೀಮತಿ ಶಾರದಾ ಯು. ಉಪಾಧ್ಯಕ್ಷರಾದ ಶ್ರೀಧರ ಕುತ್ಯಾಳ ಸದಸ್ಯರುಗಳಾದ ಇಬ್ರಾಹಿಂ ಕಾಸಿಂ , ಜಗನ್ನಾಥ ಬಿ ಎಚ್ ಪಂ.ಅ.ಅಧಿಕಾರಿ ಶ್ರೀಮತಿ ಸರೋಜಿನಿ ಬಿ, ಕೆನರಾ ಬ್ಯಾಂಕ್ ಜಾಲ್ಸೂರು ಶಾಖೆಯ ವ್ಯವಸ್ಥಾಪಕರಾದ ರಾಘವೇಂದ್ರ , ಆಪ್ತ ಸಮಲೂಚಕರಾದ ಶ್ರೀಮತಿ ಸುಜಾತ ಇವರುಪಾಸ್ಥಿತರಿದ್ದರು.










