ಅಗ್ನಿ ದುರಂತಕ್ಕೆ ತುತ್ತಾದ ಅರಂತೋಡು ಘನ ತಾಜ್ಯ ಘಟಕಕ್ಕೆ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರುರವರಿಂದ ರೂ ೫ಲಕ್ಷ ಅನುದಾನ ಘೋಷಣೆ

0

ರಾಜ್ಯಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆರಂತೋಡು ಗ್ರಾಮ ಪಂಚಾಯತ್‌ನ ಘನ ತ್ಯಾಜ್ಯ ಘಟಕ ( ಸ್ವಚ್ಛ ಸಂಕೀರ್ಣ )ಜುಲೈ ೯ರಂದು ಆಕಸ್ಮಿಕ ಅಗ್ನಿ ದುರಂತಕ್ಕೆ ತುತ್ತಾಗಿ ಸಂಪೂರ್ಣ ನಾಶಗೊಂಡಿದ್ದು, ಅದರ ಪುನರ್ ನಿರ್ಮಾಣಕ್ಕೆ ಕರ್ನಾಟಕದ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರುರವರು ತಕ್ಷಣಕ್ಕೆ ರೂ ೫ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದ್ದು. ಉಳಿದ ಅನುದಾನಕ್ಕೆ ಸ್ವಚ್ಛ ಭಾರತ್ ಮಿಷನ್ ಅನುದಾನ ಮುಖಾಂತರ ಬಿಡುಗಡೆಗೆ ಪ್ರಯತ್ನಸುವುದಾಗಿ ತಿಳಿಸಿದ್ದಾರೆ.