ದ್ವಿಚಕ್ರ ವಾಹನ ಸಂಚಾರಕ್ಕೆ ಮಾತ್ರ ಅವಕಾಶ ಸಾಧ್ಯತೆ

ಸುಳ್ಯನಗರದ ಕುರುಂಜಿಭಾಗ್ ನಿಂದಾಗಿ ಭಸ್ಮಡ್ಕ ಹೋಗುವ ರಸ್ತೆ ಕುರುಂಜಿ ದೈವಸ್ಥಾನದ ಸಮೀಪ ಮತ್ತಷ್ಟು ಕುಸಿದಿದೆ.









ಮೂರು ವಾರಗಳ ಹಿಂದೆ ಬಾರೀ ಮಳೆಗೆ ರಸ್ತೆ ಕುಸಿದಿತ್ತು. ಇದೀಗ ಅದೇ ಜಾಗದಲ್ಲಿ ಮತ್ತಷ್ಟು ರಸ್ತೆ ಕುಸಿದಿದೆ. ಇದರಿಂದ ವಾಹನ ಸಂಚಾರ ನಿರ್ಬಂಧ ಸಾಧ್ಯತೆ ಇದೆ. ದ್ವಿಚಕ್ರ ವಾಹನಕ್ಕೆ ಮಾತ್ರ ಸಂಚರಿಸಬಹುದಾದಷ್ಟು ಸ್ಥಳವಕಾಶ ಇದೆ.
ಈ ಕುರಿತು ನಗರಾಡಳಿತ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಊರವರು ಒತ್ತಾಯಿಸಿದ್ದಾರೆ.










