ಸುಬ್ರಹ್ಮಣ್ಯ :ಹೆದ್ದಾರಿ ಪರಿಸರಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಸ್ವಚ್ಚತೆಗೆ ರವಿ ಕಕ್ಕೆಪದವು ಟ್ರಸ್ಟ್ ವತಿಯಿಂದ ಮನವಿ

ಕುಕ್ಕೆ ಸುಬ್ರಮಣ್ಯಕ್ಕೆ ದಿನ ನಿತ್ಯ ಬರುವ ಭಕ್ತರು ಎಲ್ಲೆಡೆ ಹೆದ್ದಾರಿ ಬದಿಗಳಲ್ಲಿ ಪ್ಲಾಸ್ಟಿಕ್ ಹಾಗೂ ಇನ್ನಿತರ ಕಚ್ಚಾ ವಸ್ತುಗಳನ್ನು ಎಸೆದು ಹೋಗುತ್ತಿದ್ದು ಅದನ್ನು ಡಿ.14 ರಂದು ಡಾl ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನವರು ಕುಮಾರಧಾರ ಸ್ಥಾನಘಟ್ಟ ಹಾಗೂ ಸೇತುವೆ ಭಾಗ ಮತ್ತು ಕುಲ್ಕುಂದ ವರೆಗೆ ರಸ್ತೆದ ಅಕ್ಕಪಕ್ಕದಲ್ಲಿ ಇರುವ ಕಸಗಡ್ಡಿಗಳು, ಪ್ಲಾಸ್ಟಿಕ್ ಚೀಲ, ಇನ್ನಿತರ ವಸ್ತುಗಳನ್ನ ಶೇಖರಿಸಿ ಸ್ವಚ್ಛಗೊಳಿಸುವ ಕೆಲಸ ಮಾಡಲಾಯಿತು.ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಗುಂಪು ರಚಿಸಿ ಒಂದೊಂದು ಗುಂಪಿಗೆ ಒಂದೊಂದು ಜವಾಬ್ದಾರಿ ನೀಡಿ ಕೆಲಸ ಕಾರ್ಯ ಮಾಡಲಾಯಿತು.

ಸ್ವಚ್ಚತೆಗೆ ಟ್ರಸ್ಟ್ ವತಿಯಿಂದ ಮನವಿ

ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಪ್ಲಾಸ್ಟಿಕ್ ಹಾಗು ಇನ್ನಿತರ ವಸ್ತುಗಳನ್ನ ತರಬಾರದು. ಹಾಗೊಂದು ವೇಳೆ ತಂದಲ್ಲಿ ಅದನ್ನ ಪಕ್ಕದಲ್ಲಿರುವ ಡಸ್ಟ್ ಬಿನ್ನಿಗೆ ಹಾಕುವಂತೆ’ . ಪ್ಲಾಸ್ಟಿಕ್ ಬಾಟಲ್, ಚೀಲ ಅಥವಾ ಇನ್ನಿತರ ಪ್ಲಾಸ್ಟಿಕ್ ವಸ್ತುಗಳು ನಿಮ್ಮಲ್ಲಿದ್ದರೆ ಅದನ್ನು ಹಾಗೆ ನಿಮ್ಮ ಊರಿಗೆ ತೆಗೆದುಕೊಂಡು ಹೋಗಿ ವಿಲೇವಾರಿ ಮಾಡಿಕೊಳ್ಳುವಂತೆ ವಿನಂತಿಸಲಾಗಿದೆ. ಪ್ಲಾಸ್ಟಿಕ್ ಬಾಟಲ್ ಕಾಗದ ಚೀಲ ಪ್ಲೇಟುಗಳನ್ನು ತಿಂದಂತಹ ಯಪ್ರಾಣಿಗಳು ನರಕಾಯತನೇ ಅನುಭವಿಸುತ್ತಿರುವುದನ್ನು ಕೂಡ ನಾವು ನೋಡಬಹುದು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಪ್ಲಾಸ್ಟಿಕ್ ಮುಕ್ತ ಕ್ಷೇತ್ರವಾಗಿರುವುದರಿಂದ ಎಲ್ಲಾ ಭಕ್ತಾದಿಗಳು ಸಹಕರಿಸಬೇಕಾಗಿ ರವಿ ಕಕ್ಕೆಪದವು ಟ್ರಸ್ಟ್ ನ ವತಿಯಿಂದ ವಿನಂತಿಸಲಾಗಿದೆ.