ಉದ್ದಂಪಾಡಿ ರಾಮಣ್ಣ ನಾಯ್ಕರವರಿಗೆ ಶ್ರದ್ಧಾಂಜಲಿ – ವೈಕುಂಠಸಮಾರಾಧನೆ

0

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕ ಉದ್ದಂಪಾಡಿ ರಾಮಣ್ಣ ನಾಯ್ಕರವರು ಡಿ.04 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠಸಮಾರಾಧನೆಯು
ಡಿ.15 ರಂದು ಉದ್ದಂಪಾಡಿ ಮನೆಯಲ್ಲಿ ನಡೆಯಿತು.


ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶಿವರಾಮ ಗೌಡ ನೆಕ್ರೆಪ್ಪಾಡಿ ಮತ್ತು ನಿವೃತ್ತ ಶಿಕ್ಷಕ ಬಟ್ಯ ನಾಯ್ಕರವರು ದಿ.ರಾಮಣ್ಣ ನಾಯ್ಕ ಉದ್ದಂಪಾಡಿಯವರ ಆದರ್ಶ ಗುಣಗಳ ಬಗ್ಗೆ ಮತ್ತು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ದಿನಗಳನ್ನು ನೆನಪಿಸಿ ಗುಣಗಾನಗೈದು ನುಡಿನಮನ ಸಲ್ಲಿಸಿದರು.


ಆಗಮಿಸಿದ ನೂರಾರು ಜನ ಗಣ್ಯರು ರಾಮಣ್ಣ ನಾಯ್ಕರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತರ ಪತ್ನಿ ಶ್ರೀಮತಿ ಸರಸ್ವತಿ,ಪುತ್ರರಾದ ಕರುಣಾಕರ ಉದ್ದಂಪಾಡಿ,ಕೇಶವ ಉದ್ದಂಪಾಡಿ,ಸುಳ್ಯ ಕೆ.ವಿ.ಜಿ.ಐ.ಟಿ.ಐ ಉದ್ಯೋಗಿ ಜಗದೀಶ ಉದ್ದಂಪಾಡಿ,ಚಿದಾನಂದ ಉದ್ದಂಪಾಡಿ ಶ್ರೀಮತಿ ಚಂದ್ರಕಲಾ ಸದಾಶಿವ ಬಿಳಿನೆಲೆ ,ಸೊಸೆಯಂದಿರು,ಅಳಿಯ ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.