









ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಏಕದಿನ ಶಿಬಿರ ಡಿ. 12 ರಂದು ಅಜ್ಜಾವರದ ಶ್ರೀ ಶಾಸ್ತಾವೇಶ್ವರ ಸಭಾಭವನ ಕರ್ಲಪ್ಪಾಡಿಯಲ್ಲಿ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ರೂಪಾನಂದ ಕರ್ಲಪ್ಪಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಜ್ಜಾವರ ಪ್ರತಾಪ ಯುವಕ ಮಂಡಲದ ಅಧ್ಯಕ್ಷರಾದ ಗುರುರಾಜ್, ಚೈತ್ರ ಯುವತಿ ಮಂಡಲ ಅಧ್ಯಕ್ಷೆ ಶಶ್ಮಿ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವ್ಯವಸ್ಥಾಪನ ಸಮಿತಿ ಸದಸ್ಯೆ ಶ್ರೀಮತಿ ಸುಲೋಚನಾ, ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶೋಧರ ನಾರಾಲು, ಕೋಶಾಧಿಕಾರಿ ಜಗನ್ನಾಥ ರೈ ಪಡ್ಡೆಬನ, ಗುರುಮನೆ ನಾರಾಯಣ ಬೈಪಡಿತ್ತಾಯ, ಕರುಣಾಕರ ಕರ್ಲಪ್ಪಾಡಿ, ಯುವತಿ ಮಂಡಲ ಗೌರವಸಲಹೆಗಾರಾದ ಜಯಲಕ್ಷ್ಮಿ, ಯುವಕ ಮಂಡಲ ಕಾರ್ಯದರ್ಶಿ ನವೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆ
ಘಟಕಾಧಿಕಾರಿಗಳಾದ ಹರಿಪ್ರಸಾದ್ ಅತ್ಯಾಡಿ ಸ್ವಾಗತಿಸಿ, ಚಿತ್ರಲೇಖ ಕೆ.ಎಸ್ ವಂದಿಸಿದರು. ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾರ್ಥಿಗಳು, ಊರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.










