ಅಡ್ಕಾರು ಅಯ್ಯಪ್ಪ ಮಂದಿರದಲ್ಲಿ ವಾರ್ಷಿಕೋತ್ಸವ

0

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಅಯ್ಯಪ್ಪ ಸೇವಾ ಪ್ರತಿಷ್ಠಾನ ಇದರ ಅಯ್ಯಪ್ಪ ಮಂದಿರದ ೧೯ ನೇ ವಾರ್ಷಿಕೋತ್ಸವ ಇಂದು‌ ಬೆಳಗ್ಗಿನಿಂದ‌ ನಡೆಯುತ್ತಿದೆ.‌

ಡಿ.೧೫ರಂದು ಬೆಳಗ್ಗೆ ಗಣಪತಿ ಹವನ, ಬಳಿಕ ಸಂಕ್ರಮಣ ಪೂಜೆ, ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಶ್ರೀ ದೇವರ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಬೆಳಗ್ಗೆ ೯ ರಿಂದ ಭಜನೆ ಆರಂಭಗೊಂಡಿದೆ.

ಭಜನೆಯಲ್ಲಿ ಶ್ರೀ ಗಣಪತಿ ಕಲಾ ಕೇಂದ್ರ ಸುಳ್ಯ, ಕಲಾ ಕೇಸರಿ ಮಹಿಳಾ ಭಜನಾ ತಂಡ ಜಾಲ್ಸೂರು, ಶಿವಶಂಕರಿ ಭಜನಾ ಮಂಡಳಿ ತೊಡಿಕಾನ, ಸಾಹಿತ್ಯ ಸಂಗೀತ ಕಲಾ ಕೇಂದ್ರ ಸುಳ್ಯ, ಕಲಾ ಕೇಸರಿ ಭಜನಾ ತಂಡ ಜಾಲ್ಸೂರು, ಶ್ರೀ ಗುರುರಾಘವೇಂದ್ರ ಭಜನಾ ಮಂದಿರ ಜಾಲ್ಸೂರು, ಶ್ರೀ ಮೂಕಾಂಬಿಕಾ ಭಜನಾ ಮಂಡಳಿ ಬೈರವಗುಡ್ಡೆ ಮಯ್ಯಾಳ, ಶ್ರೀಮಾತಾ ಮಹಿಳಾ ಭಜನಾ ತಂಡ ಶಾಂತಿನಗರ ಸುಳ್ಯ, ಶ್ರೀ ಪ್ರಸನ್ನಾ ಆಂಜನೇಯ ಭಜನಾ ಮಂಡಳಿ ಅಂಜನಾದ್ರಿ ಅಡ್ಕಾರು ಇವರಿಂದ ನಡೆಯುತ್ತಿದೆ.

ರಾತ್ರಿ೭ ರಿಂದ ಸಾಂಸ್ಕೃತಿಕ ವೈವಿಧ್ಯ ಸ್ಥಳೀಯ ಪ್ರತಿಭೆಗಳಿಂದ. ರಾತ್ರಿ ೮.೩೦ ಕ್ಕೆ ಶ್ರೀ ದೇವರ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯುವುದು.