ಕಾರ್ಯಕ್ರಮ ಆಯೋಜನೆ ಬಗ್ಗೆ ಪೂರ್ವಭಾವಿ ಸಭೆ



ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ವ್ಯವಸ್ಥಾಪನ ಸಮಿತಿ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸುರು ಇದರ ಸಹಭಾಗಿತ್ವದೊಂದಿಗೆ ಆ. 10 ರಂದು ಅರೆಭಾಷೆ ಹಬ್ಬ – ಆಟಿ ಜಂಬರ ಕಾರ್ಯಕ್ರಮ ನಡೆಯಲಿದ್ದು, ಪೂರ್ವಭಾವಿಯಾಗಿ ಜು. 17 ರಂದು ದೇವಸ್ಥಾನದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.









ಸೋಬಾನೆ, ಕಾಯಿಗೆ ಕಲ್ಲು ಹೊಡೆಯುವುದು, ಜಾನಪದ ಗೀತೆ, ಪಾಡ್ದನ, ಅದೃಷ್ಟ ದಾಟ ಸೇರಿದಂತೆ ವಿವಿಧ ಸ್ಪರ್ಧೆಗಳು, ಊರ ಹಿರಿಯ ನಾಗರಿಕರಿಗೆ ಮತ್ತು ಬಾಲ ಪ್ರತಿಭೆಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ಮಾಡುವುದೆಂದು ತೀರ್ಮಾನಿಸಲಾಯಿತು.

ಅರೆಭಾಷೆ ಅಕಾಡೆಮಿ ಸದಸ್ಯ ಕಾರ್ಯಕ್ರಮದ ಸಂಚಾಲಕ ಎನ್.ಎ ಜ್ಞಾನೇಶ್, ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರಿಪ್ರಕಾಶ್ ಅಡ್ಕಾರು, ಸದಸ್ಯರುಗಳಾದ ಹೇಮಚಂದ್ರ ಕುತ್ಯಾಳ, ವಿಜಯಕುಮಾರ್ ನರಿಯೂರು, ವಿನೋದ್ ಮಹಾಬಲಡ್ಕ, ಶ್ರೀಮತಿ ಸುಮತಿ ಹುಲಿಮನೆ, ಶ್ರೀಮತಿ ಸೌಮ್ಯ ಬೈತಡ್ಕ, ಶ್ರೀಮತಿ ಭಾರತಿ ಕೋನಡ್ಕ ಪದವು, ಅರೆಭಾಷೆ ಅಕಾಡೆಮಿ ಮಾಜಿ ಸದಸ್ಯೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ, ವಿಜಯ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ, ಪ್ರಮುಖರಾದ ಲೋಕನಾಥ ಕಡಪಳ, ಶರತ್ ಅಡ್ಕಾರು,ಗಣೇಶ್ ರೈ ಕುಕ್ಕoದೂರು, ರಜತ್ ಅಡ್ಕಾರು, ಭಾಸ್ಕರ್ ಅಡ್ಕಾರು, ವಿಜಯಕುಮಾರ್ ಕೊಡ್ತಿಲು, ಗಿರಿಧರ್ ವಿನೋಬಾನಗರ, ಗೋಪಾಲ್ ಪದವು, ರೇವತಿ ಕಾಳಮ್ಮನೆ, ಭಾರತಿ ಕಾಳಮ್ಮನೆ ಉಪಸ್ಥಿತರಿದ್ದರು.











