ಸುಳ್ಯದ ಸಿ.ಎ.ಬ್ಯಾಂಕ್ ಕಾಂಪ್ಲೆಕ್ಸ್ ಗೆ ಶ್ರೀ ಗಣೇಶ್ ಟೈಲರ್ಸ್ ಸ್ಥಳಾಂತರ ಗೊಂಡು ಶುಭಾರಂಭ

0

ಸುಳ್ಯದ ಅಂಬಟೆಡ್ಕದಲ್ಲಿ ಕಳೆದ 15 ವರ್ಷಗಳಿಂದ ವ್ಯವಹರಿಸುತ್ತಿದ್ದ
ಶ್ರೀಮತಿ ಗೀತಾ ಮತ್ತು ಮುರಳೀಧರ ರೈ ಮೇನಾಲ ಇವರ ಮಾಲಕತ್ವದ
ಶ್ರೀ ಗಣೇಶ್ ಟೈಲರ್ಸ್ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಎದುರಿನ ಸಿ.ಎ.ಬ್ಯಾಂಕಿನ ಕಮರ್ಷಿಯಲ್ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು
ಜು.16 ರಂದು ಶುಭಾರಂಭಗೊಂಡಿತು.

ಸಿ.ಎ.ಬ್ಯಾಂಕಿನ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯ ರವರು ದೀಪ ಪ್ರಜ್ವಲಿಸಿದರು. ಈ ಸಂದರ್ಭದಲ್ಲಿ
ಸಿ.ಎ.ಬ್ಯಾಂಕ್ ಸಿ.ಇ.ಒ ಸುದರ್ಶನ್ ಸೂರ್ತಿಲ, ಪ್ರಮುಖರಾದ ಸುಭೋದ್ ಶೆಟ್ಟಿ ಮೆನಾಲ, ಶ್ರೀಮತಿ ಯಶೋಧ ರಾಮಚಂದ್ರ ಸುಳ್ಯ,ಪ್ರಭೋದ್ ಶೆಟ್ಟಿ ಮೇನಾಲ, ಶಶಿಧರ ಶೆಟ್ಟಿ, ವೆಂಕಟ್ರಮಣ ಮುಳ್ಯ, ಶಿವರಾಮಕೇರ್ಪಳ,
ದಾಮೋದರ ಮಂಚಿ, ದಿನೇಶ್ ಕೋಟ್ಯಾನ್,
ಕುಶಾಲಪ್ಪ ಗೌಡ,
ಗಣೇಶ್ ರೈ ಮರ್ಕಂಜ, ಚಿದಾನಂದ, ಮಹಾಬಲ ರೈ ಬೂಡು, ಜಯಲಕ್ಷ್ಮಿ ಪಿಂಕಿ ಟೈಲರ್, ಜಯಪ್ರಕಾಶ್ ಟೈಲರ್, ಶ್ರೀಮತಿ ಭವಾನಿ ರೈ ಕಂಟ್ರಮಜಲು ರವರು ಶುಭ ಹಾರೈಸಿದರು.
ಸುಮಾರು 30 ವರ್ಷಗಳಿಂದ ಟೈಲರ್ ವೃತ್ತಿ ನಡೆಸಿಕೊಂಡು ಬರುತ್ತಿದ್ದು ಗ್ರಾಹಕರ ಹೆಚ್ಚಿನ ಅನೂಕೂಲಕ್ಕಾಗಿ ನಗರ ಕೇಂದ್ರ ಭಾಗಕ್ಕೆ ಇದೀಗ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದರು.