ಪಂಜ:ವಲಯ ಅರಣ್ಯಾಧಿಕಾರಿ ಸಂತೋಷ್ ಕುಮಾರ್ ರೈ ಮತ್ತು ಭಾಗವತರು ಕು। ರಚನಾ ಚಿದ್ಗಲ್ ರವರಿಗೆ ಗೌರವಾರ್ಪಣೆ

0

ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಪಂಜ ಇದರ ಆಶ್ರಯದಲ್ಲಿ
ವಲಯ ಅರಣ್ಯ ಅಧಿಕಾರಿಗಳಾಗಿ ಭಡ್ತಿಗೊಂಡು ಮಂಗಳೂರು ಅರಣ್ಯ ಸಂಚಾರಿ ದಳದಲ್ಲಿ ಕರ್ತವ್ಯದಲ್ಲಿರುವ ಸಂತೋಷ್ ಕುಮಾರ್ ರೈ ಯವರಿಗೆ ಮತ್ತು ಶ್ರವಣ ಸ್ವರ ಪ್ರಶಸ್ತಿ ಪಡೆದ ಕು। ರಚನಾ ಚಿದ್ಗಲ್ ಇವರಿಗೆ ಗೌರವಾರ್ಪಣೆ ಮತ್ತು ಶ್ರೀ ದುರ್ಗಾಪೂಜೆ
ಜು. 18 ರಂದು ಪಂಜ ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಕೇಂದ್ರ ಸಭಾಭವನದಲ್ಲಿ ನಡೆಯಿತು.


ಕಾರ್ಕಳ ಶ್ರೀ ಭುವನೇಂದ್ರ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ. ಪದ್ಮನಾಭ ಬಿಳಿಮಲೆ ಅಭಿನಂದನ ಭಾಷಣ ಮಾಡಿ.
“ಈ ನಾಡು ಹೆಮ್ಮೆ ಪಡುವಂತ ಒಬ್ಬ ಅರಣ್ಯಾಧಿಕಾರಿ ಪದೋನ್ನತಿ ಹೊಂದಿ ವರ್ಗಾವಣೆ ಗೊಂಡಿದ್ದಾರೆ.ಇಂದಿನ ಕಾಲ ಘಟ್ಟದಲ್ಲಿ ಅಧಿಕಾರಿಯೊಬ್ಬ ಇಂತಹ ಗೌರವಾರ್ಪಣೆ ಸ್ವೀಕರಿಸುವುದು ಅಷ್ಟು ಸುಲಭವಲ್ಲ.ಈ ನಾಡಿನ ಹಸಿರಿಗಾಗಿ ಜನರೊಂದಿಗೆ ಬೆರೆತು ಬೆಳೆದ ಅತ್ಯುತ್ತಮ ಉತ್ತಮ ಅಧಿಕಾರಿ ‌ಸಂತೋಷ್ ಕುಮಾರ್ ರೈ ರವರು ಎಂದು ಹೇಳಿದರು.
ಬಳಿಕ ಅವರು ಮಾತನಾಡಿ “ಕು.ರಚನಾ ಚಿದ್ಗಲ್ಲು ಉದಯೋನ್ಮುಖ ಕಲಾವಿದೆ. ಸಣ್ಣ ವಯಸ್ಸಿನಲ್ಲೇ ಶ್ರಮ ವಹಿಸಿ ಎತ್ತರಕ್ಕೆ ಏರಿದ್ದಾರೆ.ಮುಂದೆ ಯಕ್ಷಗಾನ ಕ್ಷೇತ್ರದಲ್ಲಿ ದೊಡ್ಡ ಸ್ಥಾನ ಪಡೆದು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ.”ಎಂದು ಶುಭ ಹಾರೈಸಿದರು.
ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಾಲಕೃಷ್ಣ ಪುತ್ಯ ಸಭಾಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್ ,
ನ್ಯಾಯವಾದಿ ದಿಲೀಪ್ ಬಾಬ್ಲುಬೆಟ್ಟು ಹಾಗೂ ಹಿರಿಯ ಕಲಾವಿದ ಕೆ.ಕೃಷ್ಣ ವೈಲಾಯ ಶುಭ ಹಾರೈಸಿದರು.
ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ನಾಗಪ್ಪ ಗೌಡ ಪಂಜದಬೈಲು , ಅಳ್ಪೆ ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು- ಉಳ್ಳಾಲ್ತಿ ಮಹಿಷಂತಾಯ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದೇವದಾಸ ರೈ ಕೆಬ್ಲಾಡಿ, ಯಕ್ಷ ಪಟ್ಲ ಪೌಂಡೇಶನ್ ಪುತ್ತೂರು ತಾಲೂಕು ಸಂಚಾಲಕ ಪ್ರಶಾಂತ್ ರೈ ಪಲ್ಲೋಡಿ, ಶ್ರೀ ಶಾರದಾಂಬಾ ಭಜನಾ ಮಂಡಳಿ ಕಾರ್ಯದರ್ಶಿ ಗುರುಪ್ರಸಾದ್ ತೋಟ,
ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಪವನ್ ಪಲ್ಲತ್ತಡ್ಕ , ಯಕ್ಷಗಾನ ನಾಟ್ಯಗುರು ಗಿರೀಶ್ ಗಡಿಕಲ್ಲು, ಶ್ರೀಮತಿ ಪುಷ್ಪ ಡಿ ಪ್ರಸಾದ್ ಕಾನತ್ತೂರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ದೇವದಾಸ ರೈ ಕೆಬ್ಲಾಡಿ ರವರು ವಲಯ ಅರಣ್ಯ ಅಧಿಕಾರಿ ಸಂತೋಷ್ ಕುಮಾರ್ ರೈ ರವರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಕು.ರಚನಾ ಚಿದ್ಗಲ್ಲು ಪ್ರಾರ್ಥಿಸಿದರು. ಗಿರೀಶ್ ಗಡಿಕಲ್ಲು ಸ್ವಾಗತಿಸಿದರು. ಭಜನಾ ಮಂಡಳಿಯ ಉಪಾಧ್ಯಕ್ಷ ಪರಮೇಶ್ವರ ಬಿಳಿಮಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಜಿವ ಶ್ಯಾಮ್ ಚಿಕ್ಮುಳ್ಳಿ ಸನ್ಮಾನ ಪತ್ರ ವಾಚಿಸಿದರು.ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು. ಗುರುಪ್ರಸಾದ್ ತೋಟ ವಂದಿಸಿದರು.ಬಳಿಕ ಶ್ರೀ ದುರ್ಗಾ ಪೂಜೆಯ ಮಹಾ ಪೂಜೆ, ಪ್ರಸಾದ ವಿತರಣೆ ನಡೆಯಿತು.