ಸಾಧಕ ಶಿಕ್ಷಕಿಯರಿಗೆ ಹಾಲ್ ಆಫ್ ಫೇಮ್ ಗೌರವ
ಬೆಳ್ಳಾರೆ ಜ್ಞಾನದೀಪ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಪ್ರಮಾಣ ಪತ್ರ ವಿತರಣೆ ಸಾಧಕ ಶಿಕ್ಷಕಿಯರುಗಳಿಗೆ ಅಭಿನಂದನಾ ಕಾರ್ಯಕ್ರಮ ” ಹಾಲ್ ಆಫ್ ಫೇಮ್ 2025 ” ಕಾರ್ಯಕ್ರಮವು ಜ್ಞಾನದೀಪ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಸ್ವಾಗತಿಸಿ, ಪ್ರಸ್ತಾವನೆಗೈದರು.















ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ, ಭಾರತ್ ಸೇವಕ್ ಸಮಾಜದ ಜಿಲ್ಲಾ ಸಂಯೋಜಕ ರಘು ಕುಮಾರ್, ಉಪ್ಪಳ ನ್ಯೂ ಭಾರತ್ ಕಾಲೇಜು ಶಿಕ್ಷಕ ಸಂಜೀವ ಕೆ. ಬಿ. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಸಾಧಕ ಶಿಕ್ಷಕಿಯರನ್ನು ಅಭಿನಂದಿಸಿದರು.
ಜ್ಞಾನ ದೀಪ ಶಿಕ್ಷಣ ಸಂಸ್ಥೆ ಇಂಥ ತರಬೇತಿಯ ಮೂಲಕ ಅನೇಕರ ಪಾಲಿನ ಬದುಕಿನ ದೀಪವೂ ಆಗಿದೆ ಎಂದು ದುರ್ಗಾಕುಮಾರ್ ನಾಯರ್ ಕೆರೆಯವರು ಶ್ಲಾಘಿಸಿದರು.

ಭಾರತ್ ಸೇವಕ್ ಸಮಾಜದ ಸಂಯೋಜನೆಯ ಶಿಕ್ಷಣ ತರಬೇತಿ ಸಂಸ್ಥೆಗಳ ಪೈಕಿ ಜ್ಞಾನ ದೀಪ ಅತ್ಯುತ್ತಮ ಸಾಧನೆ ಮಾಡಿದೆ ಎಂದು ರಘು ಕುಮಾರ್ ಪ್ರಶಂಸಿಸಿದರು.
ಸಂಸ್ಥೆಯ ಉಪನ್ಯಾಸಕ ಯೋಗೀಶ್ ತಳೂರು ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಸಿಂಚನಾ ಕೆ.ಪಿ. ವಂದಿಸಿದರು.










