ನೆಲದ ನಂಟು ಗಟ್ಟಿಯಾಗಿರಬೇಕು:ರಂಜನ್ ಸ್ವಾಮಿ
ಆಧುನಿಕ ಜೀವನದ ಪ್ರಭಾವದಲ್ಲಿ ನಾವು ಮೂಲ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ನಮ್ಮ ಅನ್ನದ ಬಟ್ಟಲು ತುಂಬುವ ಧಾನ್ಯಗಳು ಎಲ್ಲಿ ಸಿಗುತ್ತವೆ ಮತ್ತು ಹೇಗೆ ಬೆಳೆಯುತ್ತವೆ ಎಂಬುದೇ ಮಕ್ಕಳಿಗೆ ಗೊತ್ತಿಲ್ಲ. ಮನೆಯಲ್ಲೂ ಅದನ್ನು ಹೇಳಿಕೊಡುತ್ತಿಲ್ಲ ಮತ್ತು ಶಾಲೆಗಳಲ್ಲೂ ಪಠ್ಯದ ಹೊರತಾಗಿ ಕಲಿಕೆಯೇ ಇಲ್ಲ. ಇಂತಹ ಸಂದರ್ಭದಲ್ಲಿ ಸ್ನೇಹ ಶಾಲೆಯಲ್ಲಿ ಭತ್ತದ ಗದ್ದೆಯನ್ನು ನಿರ್ಮಿಸಿ ಮಕ್ಕಳಿಗೆ ಭತ್ತವನ್ನು ಬೆಳೆದು ಅಕ್ಕಿಯನ್ನು ಪಡೆಯುವ ಪ್ರಾಯೋಗಿಕ ಶಿಕ್ಷಣ ನೀಡುತ್ತಿರುವುದು ಅನುಕರಣೀಯ ಕಾರ್ಯ ಡಾ. ಚಂದ್ರಶೇಖರ ದಾಮ್ಲೆಯವರ ಈ ಕೊಡುಗೆ ಪ್ರಶಂಸನೀಯವಾದುದು ಎಂಬುದಾಗಿ ಮಂಗಳೂರಿನ ರಾಮಕೃಷ್ಣಾಶ್ರಮದ ಆಡಳಿತಾಧಿಕಾರಿ ರಂಜನ್ ಸ್ವಾಮಿ ಯವರು ಹೇಳಿದರು. ಅವರು ಸ್ನೇಹ ಶಾಲೆಯಲ್ಲಿ ಎರಡನೇ ವರ್ಷ ನೇಜಿ ನೆಡುವ ಕಾರ್ಯಕ್ರಮವನ್ನು ಗದ್ದೆಗೆ ಹಾಲೆರೆದು ಉದ್ಘಾಟಿಸಿದರು.
















ಆರಂಭದಲ್ಲಿ ಸ್ನೇಹ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಸ್ವಾಗತಿಸಿದರು. ತೆನೆ ನೆಡುವಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು, ಪೋಷಕರು, ನಿತ್ಯಾನಂದ ಗುಂಡ್ಯ, ಆಡಳಿತ ಮಂಡಳಿಯವರು ಭಾಗವಹಿಸಿದ ಈ ಕಾರ್ಯಕ್ರಮದ ಕೊನೆಯಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ವಂದನಾರ್ಪಣೆ ಮಾಡಿದರು.










