ಸರ್ಕಾರಿ ಪ್ರೌಢಶಾಲೆ ಎಣ್ಮೂರು ಇಲ್ಲಿಯ ಗದ್ದೆಯಲ್ಲಿ ನೇಜಿ ನಾಟಿ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಯಿತು ವಿದ್ಯಾರ್ಥಿಗಳು ಮಣ್ಣನ್ನೂ ಹದಮಾಡಿ ಅದಕ್ಕೆ ಬೂದಿ, ಹಟ್ಟಿಗೊಬ್ಬರ, ತರಗೆಲೆಯನ್ನ ಮಿಶ್ರಣ ಮಾಡಿ , ನೀರು ಹಾಯಿಸಿ ಮಣ್ಣನ್ನೂ ಸಮತಟ್ಟು ಗೊಳಿಸಿದರು ಶಾಲಾ ಅಡುಗೆ ಸಿಬ್ಬಂದಿಯವರು









ಹಾಗೂ ಶಿಕ್ಷಕವೃಂದದವರು ಸೇರಿ ನೇಜಿನಾಟಿ ಮಾಡಿದರು ಮುಖ್ಯ ಶಿಕ್ಷಕರಾದ ಶ್ರೀಯುತ ಟೈಟಸ್ ವರ್ಗೀಸ್ ರವರು ನೇಜಿ ನಾಟಿ ಯ ಮಹತ್ವವನ್ನ ತಿಳಿಸಿದರು, ಗಣಿತ ಶಿಕ್ಷಕರಾದ ಶ್ರೀಯುತ ಸಂತೋಷ ಸರ್ರವರು ನೇಜಿನೆಡುವ ವಿಧಾನದ ಬಗ್ಗೆ ತಿಳಿಸಿದರು ಶಿಕ್ಷಕರಾದ ಶ್ರೀಮತಿ ಸುಮಿತ್ರ ಹಾಗೂ ಶ್ರೀಮತಿ ಉಷಾ ಮತ್ತು ಶ್ರೀಮತಿ ಗುಣಶ್ರೀ ಮೇಡಂ ಭಾಗವಹಿಸಿದರು.

ನೇಜಿಯ ವ್ಯವಸ್ಥೆಯನ್ನ ಶ್ರೀಯುತ ಲಯನ್ ಸುರೇಶ್ ನಡ್ಕ ಹಾಗೂ ವಿದ್ಯಾರ್ಥಿನಿ ಮೇಘಶ್ರೀ ಯವರು ಕೊಟ್ಟು ಸಹಕರಿಸಿದರು ಚಿತ್ರಕಲಾ ಶಿಕ್ಷಕರಾದ ಶ್ರೀಯುತ ಮೋಹನ, ಎ ಯವರು ಕಾರ್ಯಕ್ರಮವನ್ನಸಂಘಟಿಸಿ ಎಲ್ಲರಿಗೂ ವಂದಿಸಿದರು.










