ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಮಂಗಳೂರು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಿನ್ನಿಗೋಳಿ ಇದರ ಜಂಟಿ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯು ಜು. 20 ರಂದು ಮಂಗಳೂರಿನ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು.








10 ರಿಂದ 14ರ ವಯೋಮಿತಿಯ ಸಬ್ ಜೂನಿಯರ್ ಬಾಲಕಿಯರ ವಿಭಾಗದ ಟ್ರೆಡಿಷನಲ್ ಯೋಗಾಸನ ಸ್ಪರ್ಧೆಯಲ್ಲಿ ಹಾರ್ದಿಕ ಕೆರೆಕ್ಕೋಡಿ ಚಿನ್ನದ ಪದಕ, ಆರ್ಟಿಸ್ಟಿಕ್ ಸಿಂಗಲ್ ವಿಭಾಗದಲ್ಲಿ ಚಿನ್ನದ ಪದಕ,ವೈಯಕ್ತಿಕ ಹ್ಯಾಂಡ್ ಬ್ಯಾಲೆನ್ಸ್ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ. ಇವರು ಕೃಷ್ಣಪ್ಪ ಹಾಗೂ ಪುಷ್ಪಾವತಿ ದಂಪತಿಗಳ ಪುತ್ರಿ.
10 ರಿಂದ 14ರ ವಯೋಮಿತಿಯ ಸಬ್ ಜೂನಿಯರ್ ಬಾಲಕಿಯರ ವಿಭಾಗದ ಲೆಗ್ ಬ್ಯಾಲೆನ್ಸ್ ಯೋಗಾಸನ ಸ್ಪರ್ಧೆಯಲ್ಲಿ ಸನುಷಾ ಕೆ ಕೆ ಚಿನ್ನದ ಪದಕ ಪಡೆದಿರುತ್ತಾರೆ.ಇವರು ಕಲ್ಲುಗುಂಡಿ ಕರುಣಾಕರ ಕೆ ಎನ್ ಹಾಗೂ ರಶ್ಮಿ ಬಿ ಕೆ ಇವರ ಪುತ್ರಿ.
10 ರಿಂದ 14ರ ವಯೋಮಿತಿಯ ಬಾಲಕಿಯರ ವಿಭಾಗದ ಫಾರ್ ವರ್ಡ್ ಬೆಂಡ್ ಯೋಗಾಸನ ಸ್ಪರ್ಧೆಯಲ್ಲಿ ವರ್ಷ ಕೆ ಜಿ ಚಿನ್ನದ ಪದಕ ಹಾಗೂ ಆರ್ಟಿಸ್ಟಿಕ್ ಪೇರ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿರುತ್ತಾರೆ. ಇವರು ಮಿಲಿಟರಿಗ್ರೌಂಡ್ ಜಯನಗರ ಗುರುಪ್ರಕಾಶ್ ಕೆ ಸಿ ಹಾಗೂ ವನಜಾಕ್ಷಿ ದಂಪತಿಗಳ ಪುತ್ರಿ.
10 ರಿಂದ 14 ಸಬ್ ಜೂನಿಯರ್ ವಯೋಮಿತಿಯ ಆರ್ಟಿಸ್ಟಿಕ್ ಪೇರ್ ವಿಭಾಗದಲ್ಲಿ ಸಾನ್ವಿ ಡಿ ಪಂಜ ಬೆಳ್ಳಿಯ ಪದಕ ಪಡೆದಿರುತ್ತಾರೆ. ಇವರು ನಿತ್ಯಾನಂದ ದೊಡ್ಡಮನೆ ಮತ್ತು ಸೀತಾಲಕ್ಷ್ಮಿ ದೊಡ್ಡಮನೆ ದಂಪತಿಯ ಪುತ್ರಿ.10 ರಿಂದ 14 ರ ವಯೋಮಿತಿಯ ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ ವೈಯಕ್ತಿಕ ಟ್ವಿಸ್ಟಿಂಗ್ ಯೋಗಾಸನ ಸ್ಪರ್ಧೆಯಲ್ಲಿ ತನುಷ್ ಎಂ ಹೆಚ್ ಚಿನ್ನದ ಪದಕ, ಬ್ಯಾಕ್ ಬೆಂಡ್ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಟ್ರಿಡಿಷನಲ್ ವಿಭಾಗದಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.ಇವರು ಹರೀಶ್ ಮೋಂಟಡ್ಕ ಮತ್ತು ಭವಾನಿ ದಂಪತಿಗಳ ಪುತ್ರ.
14 ರಿಂದ 18 ರ ವಯೋಮಿತಿಯ ಜೂನಿಯರ್ ಬಾಲಕರ ಟ್ರೆಡಿಷನಲ್ ವಿಭಾಗದಲ್ಲಿ ತನುಷ್ ಕೆ ಆರ್ ಬೆಳ್ಳಿಯ ಪದಕ, ವೈಯಕ್ತಿಕ ಸುಪೈನ್ ಯೋಗಾಸನ ವಿಭಾಗದಲ್ಲಿ ಚಿನ್ನದ ಪದಕ ಹ್ಯಾಂಡ್ ಬ್ಯಾಲೆನ್ಸ್ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ. ಇವರು ರವಿ ನಾವೂರು ಹಾಗೂ ಪ್ರಜ್ಞಾ ದಂಪತಿಗಳ ಪುತ್ರ. ಇವರು ಆಗಸ್ಟ್ ತಿಂಗಳಿನಲ್ಲಿ ನಡೆಯುವ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.
ಯೋಗ ಶಿಕ್ಷಕರಾದ ಸಂತೋಷ್ ಮುಂಡಕಜೆ ಹಾಗೂ ಪ್ರಶ್ವಿಜಾ ಸಂತೋಷ್ ಇವರು ಮಾರ್ಗದರ್ಶನ ನೀಡಿರುತ್ತಾರೆ.










