ಅಧ್ಯಕ್ಷರಾಗಿ ಪ್ರತೀಕ್, ಕಾರ್ಯದರ್ಶಿ ಸೃಜನ್, ಜೊತೆ ಕಾರ್ಯದರ್ಶಿ ಸ್ತುತಿ ರೈ








ನಿಂತಿಕಲ್ಲಿನಲ್ಲಿರುವ ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆ ಇತ್ತೀಚೆಗೆ ನಡೆಯಿತು. ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆದ ಚುನಾವಣೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪ್ರತೀಕ್ ಅಧ್ಯಕ್ಷರಾಗಿ, ಸ್ರುಜನ್ ಕಾರ್ಯದರ್ಶಿಯಾಗಿ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಸ್ತುತಿ ರೈ ಜೊತೆ ಕಾರ್ಯದರ್ಶಿಯಾಗಿ ಆಯ್ಕೆಯಾದರು. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ತೇಜಸ್ ಮತ್ತು ವಿಜ್ಞಾನ ವಿಭಾಗದ ಅನನ್ಯ ಕ್ರೀಡಾ ಕಾರ್ಯದರ್ಶಿಗಳಾಗಿ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಗಗನ್ ಮತ್ತು ವಾಣಿಜ್ಯ ವಿಭಾಗದ ಪ್ರಣವಿ ಸಾಂಸ್ಕೃತಿಕ ಕಾರ್ಯದರ್ಶಿ ಗಳಾಗಿ ಆಯ್ಕೆಯಾದರು. ಉಪನ್ಯಾಸಕರಾದ ಜೀವನ್ ಮುಖ್ಯ ಚುನಾವಣಾಧಿಕಾರಿ ಹಾಗೂ ಉಜ್ವಲ್, ವೇದಾವತಿ, ಜ್ಯೋತ್ಸ್ನಾ, ಸಂಧ್ಯಾ, ಸೌಮ್ಯ, ಜಾಸ್ಮಿನ್, ಅನುಷಾ ಚುನಾವಣಾ ಪ್ರಕ್ರಿಯೆಗಳನ್ನು ಸುವ್ಯವಸ್ಥಿತವಾಗಿ ನಡೆಸಿಕೊಟ್ಟರು. ಪ್ರಾಚಾರ್ಯರಾದ ಸದಾನಂದ ರೈ ಕೂವೆಂಜ ಮಾರ್ಗದರ್ಶನ ನೀಡಿದರು.










