11 ವರ್ಷ 4 ತಿಂಗಳ ವಯಸ್ಸಿನಲ್ಲಿ, 1 ಗಂಟೆ 18 ನಿಮಿಷಗಳಲ್ಲಿ 10 ವಿಭಿನ್ನ ಖಾದ್ಯಗಳನ್ನು ಅಡುಗೆ ಮಾಡುವ ಮೂಲಕ 11 ವರ್ಷ 4 ತಿಂಗಳ ಬಾಲಕಿ ಥನೀಶಾ ಶೆಟ್ಟಿ ಇಂಟರ್ನೇಶನಲ್ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾರೆ. ಅಡುಗೆ ಮಾಡುವ ಕೌಶಲ್ಯದಲ್ಲಿ ಅತಿಕಿರಿಯ ವಯಸ್ಸಿನಲ್ಲಿ ಅವರು ತೋರಿದ ಅಸಾಧಾರಣ ಪ್ರತಿಭೆಗಾಗಿ ಈ ಸಾಧನೆಯನ್ನು ದಾಖಲಿಸಲಾಗಿದೆ.
ಅಡುಗೆ ಮಾಡುವುದು ಥನೀಶಾ ಅವರ ಹವ್ಯಾಸ. ಭಾರತೀಯ, ಕೊರಿಯನ್ ಆಹಾರಗಳು ಮತ್ತು ವಿಭಿನ್ನ ರೀತಿಯ ಕೇಕ್‌ಗಳನ್ನು ತಯಾರಿಸಲು ಅವರಿಗೆ ವಿಶೇಷ ಆಸಕ್ತಿ ಇದೆ.








ಅವರು ಪುತ್ತೂರಿನ ಮುಂಡಾಲಗುತ್ತು ಪ್ರೀತಮ್ ಶೆಟ್ಟಿ ಮತ್ತು ಸುಳ್ಯ ಆಲೆಟ್ಟಿಯ ಮೊರಂಗಲ್ಲು ಆಶಿತಾ ಪಿ. ಶೆಟ್ಟಿ ಅವರ ಪುತ್ರಿ. ಅರಿಯಡ್ಕ ಲಕ್ಷ್ಮಿನಾರಾಯಣ ಶೆಟ್ಟಿ ಮತ್ತು ಮುಂಡಲಗುತ್ತು ಕುಮುದ ಎಲ್.ಎನ್. ಶೆಟ್ಟಿ ಹಾಗೂ ಕೋಟೆಕುಂಜ ದೇವದಾಸ್ ಆಳ್ವಾ ಮತ್ತು ಮೊರಂಗಲ್ಲು ಆಶಾಲತಾ ರೈ ಅವರ ಮೊಮ್ಮಗಳು.
ಪ್ರಸ್ತುತ ಅವರು ಬೆಂಗಳೂರಿನ ಸ್ಕೂಲ್ ನಲ್ಲಿ 7ನೇ ತರಗತಿ ಶಿಕ್ಷಣ ಪಡೆಯುತ್ತಿದ್ದಾರೆ. ಕ್ರೀಡಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.










