
ಅರಂತೋಡು ಗ್ರಾಮ ಪಂಚಾಯತ್‌ನ ಮಹತ್ವಾಕಾಂಕ್ಷಿ ಯೋಜನೆಯಲ್ಲೊಂದಾದ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮವು ಮಳೆಯ ನಡುವೆಯೂ ಜು.೨೭ ರಂದು ಬೆಳಿಗ್ಗೆ ಗಂಟೆ ೭.೩೦ರಿಂದ ೯ರ ವರೆಗೆ ಅಡ್ತಲೆಯ ಸ್ತ್ರೀ ಶಕ್ತಿ ಸಂಘಗಳ ಸಹಕಾರದೊಂದಿಗೆ ನಡೆಯಿತು.









ಕಾರ್ಯಕ್ರಮದಲ್ಲಿ ಅರಂತೋಡು ಗ್ರಾಮ ಪಂಚಾಯತ್ ಆಡಳಿತ ಸಮಿತಿ ಸದಸ್ಯರು, ಸಿಬ್ಬಂದಿ ವರ್ಗ, ಸ್ವಚ್ಛತಾ ಘಟಕದ ಸಿಬ್ಬಂದಿಗಳು ಮತ್ತು ಊರ ನಾಗರೀಕರು ಭಾಗವಹಿಸಿದ್ದರು. ಇದು ಪಂಚಾಯತ್ ನಿರಂತರ ೭೪ನೇ ಮಾಸದ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮವಾಗಿತ್ತು.










