ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಮೂವರಿಗೆ ಪಿ ಎಚ್ ಎಫ್ ಪದವಿ

0


ರೋಟರಿ ಅಂತರಾಷ್ಟ್ರೀಯ ಸಂಸ್ಥೆಯ ಸ್ಥಾಪಕರಾದ ಪವನ್ ಹ್ಯಾರಿಸ್ ಅವರ ಸವಿನೆನಪಿನಲ್ಲಿ ರೋಟರಿಯಲ್ಲಿ ಸಲ್ಲಿಸಿದ ಅತ್ಯುನ್ನತ ಸೇವೆಗಾಗಿ ಕೊಡಮಾಡುವ ಪದವಿ ಪೌಲ್ ಹ್ಯಾರಿಸ್ ಫೆಲೋಶಿಪ್ (PHF) ಯು ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ ನಾಯರ್ ಪೂರ್ವ ಅಧ್ಯಕ್ಷ ಮೈಲಪ್ಪ ಸಂಕೇಶ ಹಾಗೂ ಕಾರ್ಯದರ್ಶಿ ಚಿದಾನಂದ ಕುಳ ಇವರಿಗೆ ಈ ಬಾರಿ ಲಭಿಸಿರುತ್ತದೆ.

ಚಂದ್ರಶೇಖರ ನಾಯರ್ ಅವರು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಸಂಚಾಲಕರಾಗಿ ಬಾನಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿರಿಯ ವಿದ್ಯಾರ್ಥಿಸಂಘದ ಅಧ್ಯಕ್ಷರಾಗಿ ಹಾಗೂ ಹಲವು ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ಸೇವೆ ಸಲ್ಲಿಸ್ತಾ ಬಂದಿದ್ದಾರೆ. ಮೈಲಪ್ಪ ಸಂಕೇಶ ಅವರು ತಾಲೂಕಿನ ಹಲವು ಅಂಗನವಾಡಿಗಳಿಗೆ ಶಾಲೆಗಳಿಗೆ ಕೊಡುಗೆಗಳನ್ನು ನೀಡುತ್ತಾ ಬಂದಿರುವುದಲ್ಲದೆ ಹಲವು ಮನೆಗಳಿಗೆ ವಿದ್ಯುತ್ ಸಂಪರ್ಕದ ವ್ಯವಸ್ಥೆಯನ್ನು ಕೂಡ ಕಲ್ಪಿಸಿರುತ್ತಾರೆ. ಚಿದಾನಂದ ಕುಳ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೌಕರರಾಗಿ ಬಳ್ಪ ಯುವಕ ಮಂಡಲದ ಸದಸ್ಯರು ಆಗಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಕೂಡ ಕ್ರಿಯಾಶೀಲರಾಗಿ ಸೇವೆ ಸಲ್ಲಿಸ್ತಾ ಬಂದಿದ್ದಾರೆ. ಇವರೆಲ್ಲರೂ ರೋಟರಿ ಸಂಸ್ಥೆಯಲ್ಲಿ ಪ್ರತಿವರ್ಷ ಅಂತರಾಷ್ಟ್ರೀಯ ಸಂಸ್ಥೆಗೆ ದೇಣಿಗೆಯನ್ನು ನೀಡುತ್ತಾ ಕೂಡ ಬಂದಿರುತ್ತಾರೆ.