ಸಂಘದ ಸದಸ್ಯರ ಕುಟುಂಬ ಸಮ್ಮಿಲನ, ಸಾಧಕರಿಗೆ ಸನ್ಮಾನ
ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘದ ವಾರ್ಷಿಕ ಮಹಾಸಭೆ,ಸಾಂಸ್ಕೃತಿಕ, ಸನ್ಮಾನ ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಜು.27 ರಂದು ಸುಳ್ಯ ಶ್ರೀರಾಮಪೇಟೆಯ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಹರಿಶ್ಚಂದ್ರ ಎಂ.ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೆ.ವಿ.ಜಿ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲ ಜಯಪ್ರಕಾಶ್ ಕೆ.ಯವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.
ಸಾಮಾಜಿಕವಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸರಸ್ವತಿ ಕಾಮತ್,ನಿವೃತ್ತ ಯೋಧ ಮೋನಪ್ಪ ಗೌಡ ನಾರಾಲು,ಪ್ರಗತಿ ಆಂಬ್ಯುಲೆನ್ಸ್ ಚಾಲಕ ಅಬ್ದುಲ್ ರಜಾಕ್ (ಅಚ್ಚು) ರವರನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷ ವಸಂತ ಬೋರ್ಕರ್,ಹಿರಿಯಣ್ಣ ಐವರ್ನಾಡು,ಪುಷ್ಪಾಧರ ಕೆ.ಜೆ, ನ್ಯಾಯವಾದಿ ದಿನೇಶ್ ಮಡಪ್ಪಾಡಿ ಯವರನ್ನು ಸನ್ಮಾನಿಸಲಾಯಿತು.
ಶೈಕ್ಷಣಿಕವಾಗಿ ಸಾಧನೆ ಮಾಡಿದ ಸಿ.ಎ.ಉತ್ತೀರ್ಣರಾದ ಸ್ವರ್ಣಲತಾ ಮುಳ್ಯ ಮತ್ತು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.















ವಸಂತ ಬೋರ್ಕರ್,ಮಹಾಬಲ ರೈ, ಪುಷ್ಪಾಧರ,ಲತಾಶ್ರೀ ಯವರು ಅಭಿನಂದಿತರ ಸನ್ಮಾನ ಪತ್ರವನ್ನು ವಾಚಿಸಿದರು.
ಸಂಘಕ್ಕೆ 6 ಮಂದಿ ನೂತನ ಸದಸ್ಯರ ಸೇರ್ಪಡೆ ನಡೆಯಿತು.

ಸಂಘದ ಪದಾಧಿಕಾರಿಗಳ ಪುನರಾಯ್ಕೆ
ಪಿಗ್ಮಿ ಸಂಗ್ರಾಹಕರ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಪದಾಧಿಕಾರಿಗಳಾಗಿ ಈಗ ಇರುವ ಪದಾಧಿಕಾರಿಗಳನ್ನು ಪುನರಾಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಹರಿಶ್ಚಂದ್ರ ಎಂ, ಉಪಾಧ್ಯಕ್ಷರಾಗಿ ವಸಂತ ಬೋರ್ಕರ್ ,ಕಾರ್ಯದರ್ಶಿಯಾಗಿ ಸುನಿಲ್ ಜೆ,ಜತೆ ಕಾರ್ಯದರ್ಶಿಯಾಗಿ ಮಹಾಬಲ ರೈ,ಖಜಾಂಜಿಯಾಗಿ ಪುಷ್ಪಾಧರ ಕೆ.ಜೆ ಪುನರಾಯ್ಕೆಯಾದರು.
ನಿರ್ದೇಶಕರಾಗಿ ರಾಧಾಕೃಷ್ಣ ಬಿ.ವಿ, ಶ್ರೀಮತಿ ಆರತಿ,ಕು.ಲತಾ ಪುನರಾಯ್ಕೆಯಾದರು.
ನೂತನ ನಿರ್ದೇಸದಕರಾಗಿ ಸುನಿತಾರವರು ಆಯ್ಕೆಯಾದರು.
ವೇದಿಕೆಯಲ್ಲಿ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ,ನ್ಯಾಯವಾದಿ ಹಾಗೂ ಗೌರವ ಕಾನೂನು ಸಲಹೆಗಾರರಾದ ದಿನೇಶ್ ಮಡಪ್ಪಾಡಿ,ಪಿಗ್ಮಿ ಸಂಗ್ರಾಹಕರ ಸಂಘದ ಗೌರವಾಧ್ಯಕ್ಚ ವೆಂಕಟ್ರಮಣ ಮುಳ್ಯ,ಉಪಾಧ್ಯಕ್ಷ ವಸಂತ ಬೋರ್ಕರ್ ಉಪಸ್ಥಿತರಿದ್ದರು.
ಅಧ್ಯಕ್ಷ ಹರೀಶ್ಚಂದ್ರ ರವರು ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀಮತಿ ಆರತಿ ಪುರುಷೋತ್ತಮ್ ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿ ಶ್ರೀಮತಿ ಆರತಿ ಪುರುಷೋತ್ತಮ್ ರವರು ವಂದಿಸಿದರು.ಸಂಘದ ಸದಸ್ಯರು ಸಹಕರಿಸಿದರು.










