ವಿನೋಬನಗರ ಶಾಲೆಯಲ್ಲಿ ವಿಜ್ಞಾನ ಮಾದರಿಗಳ ಮಾಹಿತಿ ಮತ್ತು ಬಹುಮಾನ ವಿತರಣೆ

0

ವಿವೇಕಾನಂದ ಅನುದಾನಿತ ಹಿ. ಪ್ರಾ. ಶಾಲೆ ವಿನೋಬನಗರದಲ್ಲಿ ವಿಜ್ಞಾನ ಸಂಘ ಮತ್ತು ಇಕೋ ಕ್ಲಬ್ ವತಿಯಿಂದ ವಿಜ್ಞಾನ ಮಾದರಿಗಳ ಮಾಹಿತಿ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮವು ಜುಲೈ 30ರಂದು ನಡೆಯಿತು. ಈ ಸಂದರ್ಭದಲ್ಲಿ ವಿಜ್ಞಾನ ಮಾದರಿಗಳು ಇತ್ತೀಚಿನ ದಿನಗಳಲ್ಲಿ ಸಮಾಜದ ಜನರಿಗೆ ಉಪಯೋಗ ಆಗುವ ರೀತಿ ಹಾಗೂ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಒಂದು ವಿಷಯದ ವಿಶ್ಲೇಷಣೆ ನೀಡುವುದರ ಬದಲು ಉದಾಹರಣೆಯೊಂದಿಗೆ ಮಾದರಿಗಳ ಮೂಲಕ ಸ್ಪಷ್ಟತೆಯನ್ನು ವ್ಯಕ್ತಪಡಿಸುವುದು ಉತ್ತಮ ದಾರಿಯಾಗಿರುತ್ತದೆ. ಮತ್ತು ವಿಜ್ಞಾನದಲ್ಲಿ ವೈಜ್ಞಾನಿಕ ವಿಧಾನವನ್ನು ಅನ್ವೇಷಿಸುವುದರ ಉದಾಹರಣೆಯೊಂದಿಗೆ ಮಾಹಿತಿಯನ್ನು ಸಂಸ್ಥೆಯ ಸಹಶಿಕ್ಷಕರಾದ ಆಶಿಶ್ ನೀಡಿದರು. ಪ್ರಾಥಮಿಕ ಸಂಸ್ಥೆಯ ಮುಖ್ಯೋಪಾಧ್ಯರಾದ ಜಯಪ್ರಸಾದ್ ಕಾರಿಂಜ ವಿಜ್ಞಾನ ಸಂಘವು ಇಕೋ ಕ್ಲಬ್ ಜೊತೆ ಸೇರಿ ಜಂಟಿಯಾಗಿ ಕಾರ್ಯನಿರ್ವಹಿಸುವುದರೊಂದಿಗೆ ಪರಿಸರದ ಕಾಳಜಿಯನ್ನು ವಹಿಸಲು ಸಹಕಾರ ಸಿಗುತ್ತದೆ ಎಂದರಲ್ಲದೆ ಮತ್ತು ವಿಜ್ಞಾನ ಸಂಘದ ವತಿಯಿಂದ ನಡೆದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಮತ್ತು ಪದಕಗಳನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ವಿಜ್ಞಾನ ಸಂಘದ ಸದಸ್ಯರಾದ ಧವನ್ ಏಳನೇ ತರಗತಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ವಿಜ್ಞಾನ ಶಿಕ್ಷಕಿಯಾದ ಪೂರ್ಣಿಮಾ ಕಾರ್ಯಕ್ರಮ ಸಂಯೋಜಿಸಿದರು.