ಹೆಡ್ ಆಫೀಸ್ ನಿಂದ ಸಂದೇಶ ಬಂದರೆ ಮಾತ್ರ ನಿಮ್ಮ ಕೆಲಸ : ನ.ಪಂ. ಸಭೆಯಲ್ಲಿ ವೆಂಕಪ್ಪ ಗೌಡ ವ್ಯಂಗ್ಯ

0

ವಸತಿ ಯೋಜನೆ : ಹೆಡ್ ಆಫೀಸ್ ಸ್ಕೀಂ : ವಿನಯ ಕಂದಡ್ಕ ಟಾಂಗ್

ಹೆಡ್ ಆಫೀಸ್ ನಿಂದ ಸಂದೇಶ ಬಂದರೆ ಮಾತ್ರ ಬಿಜೆಪಿ ಸದಸ್ಯರು ಕೆಲಸ ಮಾಡೋದು” ಎಂದು ನ.ಪಂ. ಸದಸ್ಯ ವೆಂಕಪ್ಪ ಗೌಡ ಆಡಳಿತ ಬಿಜೆಪಿಯ ಕುರಿತು ವ್ಯಂಗ್ಯ ವಾಡಿದ ಘಟನೆ ನ.ಪಂ. ಸಭೆಯಲ್ಲಿ ನಡೆದಿದೆ.

ವಿಷಯ‌ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ವೆಂಕಪ್ಪ ಗೌಡರು “ಕಳೆದ ಸಭೆಯಲ್ಲಿ ನಾಲ್ಕು ಸ್ಥಾಯಿ‌ ಸಮಿತಿಗೆ ಅಧ್ಯಕ್ಷರ ಸಹಿತ ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇಲ್ಲಿ ಹಾಕಿಲ್ಲ. ಬದಲು ಮಾಡಿದ್ದೀರಿ. ಹೆಡ್ ಆಫೀಸ್ ನಿಂದ ನಿಮಗೆ ಸಂದೇಶ ಬಂದಿರಬೇಕು. ಅಲ್ಲಿಂದ ಸಂದೇಶ ಬಂದಂತೆ ನೀವು ಕೆಲಸ ಮಾಡುತ್ತೀರಿ” ಎಂದು ಹೇಳಿದರು. “ಹಾಗೇನಿಲ್ಲ. ಕಳೆದ ಸಭೆಯಲ್ಲಿ ಸದಸ್ಯರ ಆಯ್ಕೆ ಮಾಡಿದ್ದೇವೆ. ಇನ್ನೂ ಆ ಸಮಿತಿ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ಮಾಡಲಾಗುವುದು” ಎಂದು ಅಧ್ಯಕ್ಷರು ಸಮಜಾಯಿಷಿ ನೀಡಿದರು.

ವಿನಯ ಕಂದಡ್ಕ ರು ಮಾತನಾಡಿ “ಆಯಾ ಸ್ಥಾಯಿ‌ಸಮಿತಿಯಲ್ಲೇ ಅಧ್ಯಕ್ಷರ ಆಯ್ಕೆ ಮಾಡುವುದು ನಿಯಮ. ಅದಂತೆ ಆಗುತ್ತದೆ. ಜತೆಗೆ ಅದೇ ದಿನ ಆ ಸಮಿತಿಯ ಜವಾಬ್ದಾರಿ ತಿಳಿಸುವ ಕೆಲಸ ಕೂಡಾ ಆಗಬೇಕು ಎಂದು ಅವರು‌ ಹೇಳಿದರು.ಬಳಿಕ ಸಭೆ ಮುಂದುವರಿಯಿತು.

ಹೆಡ್ ಆಫೀಸ್ ಸ್ಕೀಮ್

ರಾಜೀವ ಗಾಂಧಿ ವಸತಿ ನಿಗಮಕ್ಕೆ ವಸತಿ ಯೋಜನೆಗೆ ಅರ್ಹ ಫಲಾನುಭವಿಗಳು ಆನ್ ಲೈನ್ ಅರ್ಜಿಸುವ ಸಲ್ಲಿಸುವ ಕುರಿತು ಪ್ರಸ್ತಾಪವಾದಾಗ ವಿನಯ ಕುಮಾರ್ ಕಂದಡ್ಕರು ” ಪಿಎಂ ಆವಾಜ್ ಯೋಜನೆ ಇದು ನಮ್ಮ ಹೆಡ್ ಆಫೀಸ್ ಸ್ಕೀಮ್” ಎಂದು ವೆಂಕಪ್ಪ ಗೌಡರನ್ನು ಕರೆದು ಹೇಳಿದರು. ಆಗ ವೆಂಕಪ್ಪ ಗೌಡರು ಸ್ಕೀಮ್ ನಿಮ್ಮದಾಗಿದ್ದರೂ ಹೆಸರು ನಮ್ಮವರದ್ದು ಎಂದು ಪ್ರತ್ಯುತ್ತರ ನೀಡಿದ ಘಟನೆಯೂ ನಡೆಯಿತು.