














ಜುಲೈ 9ರಂದು ಭೀಕರ ಅಗ್ನಿ ದುರಂತ ತುತ್ತಾದ ರಾಜ್ಯಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆರಂತೋಡು ಗ್ರಾಮ ಪಂಚಾಯತ್ ನ ಘನ ತ್ಯಾಜ್ಯ ವಿಲೇವಾರಿ ಘಟಕ ( ಸ್ವಚ್ಛ ಸಂಕೀರ್ಣ )ದ ಪುನರ್ ನಿರ್ಮಾಣಕಾಗಿ ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಆರಂತೋಡು -ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಸಮಿತಿ ಸಭೆಯಲ್ಲಿ,ಸಂಘ ದ ಉಪಾಧ್ಯಕ್ಷರು, ಆಡಳಿತ ಸಮಿತಿ ಸದಸ್ಯರು ಮತ್ತು ಮುಖ್ಯ ಕಾರ್ಯನಿರ್ವಾಣಾಧಿಕಾರಿಗಳ ಉಪಸ್ಥಿತಿಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಸಂತೋಷ ಕುತ್ತಮೊಟ್ಟೆ ಯವರಿಗೆ ಸಹಾಯ ಹಸ್ತಕ್ಕಾಗಿ ಜುಲೈ 29 ದಂದು ಮನವಿ ಸಲ್ಲಿಸಿದರು
. ಮನವಿ ತಕ್ಷಣ ಸ್ಪಂದಿಸಿದ ಸಂಘದ ಅಧ್ಯಕ್ಷರಾದ ಸಂತೋಷ ಕುತ್ತಮೊಟ್ಟೆಯವರು ಆಡಳಿತ ಸಮಿತಿ ಸದಸ್ಯರಲ್ಲಿ ಚರ್ಚೆ ನಡೆಸಿ ರಾಜ್ಯ ದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಘಟಕ ವಾಗಿರುವದರಿಂದ ನಮಗೂ ಹೆಮ್ಮೆಯ ಸಂಗತಿಯಾಗಿರುವುದರಿಂದ ಅದರ ಪುನರ್ ನಿರ್ಮಾಣಕ್ಕೆ ನಮ್ಮಸಂಸ್ಥೆ ಯ ಕೊಡುಗೆ ಅಗತ್ಯತೆಯನ್ನು ಆಡಳಿತ ಸಮಿತಿ ಸದಸ್ಯರೀಗೆ ಮನವರಿಕೆ ಮಾಡಿ ಸಹಕಾರಿ ಸಂಘದ ಸಾರ್ವಜನಿಕ ಉಪಕಾರ ನಿಧಿಯಿಂದ ರೂ 1ಲಕ್ಷ ಸಹಾಯಧನ ನೀಡಲು ಘೋಷಣೆ ಮಾಡಿದ್ದಾರೆ.










