ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಆಟಿಕೂಟ

0

ಹಿರಿಯ ಪತ್ರಕರ್ತರಿಗೆ ಸನ್ಮಾನ – ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕ ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಆಟಿಕೂಟ ಕಾರ್ಯಕ್ರಮವು ಜು.31 ರಂದು ಸುಳ್ಯ ಕನ್ನಡ ಭವನದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಸುಳ್ಯ ಮುಳಿಯ ಕೃಷ್ಣ ಭಟ್ ಸನ್ಸ್ ಜ್ಯುವೆಲ್ಲರ್ಸ್ ನ ಮಾಲಕ ಗೋವಿಂದ ಭಟ್ ಮುಳಿಯರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಅಂಕಣಕಾರ ,ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ನರೇಂದ್ರ ರೈ ದೇರ್ಲ ಪತ್ರಿಕಾ ದಿನ ಮತ್ತು ಆಟಿ ಕುರಿತ ಉಪನ್ಯಾಸ ನೀಡಿದರು.


ಕೆ.ಜೆ.ಯು ಅಧ್ಯಕ್ಷೆ ಶ್ರೀಮತಿ ಜಯಶ್ರೀ ಕೊಯಿಂಗೋಡಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕೆಜೆಯು ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್,ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಮಂಗಳೂರು ಕೆಜೆಯು ಪದಾಧಿಕಾರಿ ಹಮೀದ್ ವಿಟ್ಲ, ಕೆಜೆಯು ತಾಲೂಕು ಗೌರವಾಧ್ಯಕ್ಷ ಈಶ್ವರ ವಾರಣಾಶಿ,ಕಾರ್ಯದರ್ಶಿ ಗಣೇಶ್ ಕುಕ್ಕುದಡಿ,ಕೋಶಾಧಿಕಾರಿ ಕುಶಾಂತ್ ಮರಕ್ಕಡ ಉಪಸ್ಥಿತರಿದ್ದರು.


ಹಿರಿಯ ಪತ್ರಕರ್ತರಿಗೆ ಸನ್ಮಾನ


ಹಿರಿಯ ಪತ್ರಕರ್ತರಾದ ಭಾಸ್ಕರ ರೈ ಕಟ್ಟ ಎಣ್ಮೂರು ಮತ್ತು ಜಯರಾಮ ಭಟ್ ಸಂಪಾಜೆಯವರನ್ನು ಶಾಲು ಹೊದಿಸಿ ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.


ಕೆಜೆಯು ಸದಸ್ಯ ಶಿವರಾಮ ಕಜೆಮೂಲೆ ಮತ್ತು ಅನಿಲ್ ಕಳಂಜ ಸನ್ಮಾನ ಪತ್ರ ವಾಚಿಸಿದರು. ಹರೀಶ್ ಬಂಟ್ವಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ್ ನೀರಬಿದಿರೆ ಗೌರವಾರ್ಪಣೆ ಪಡೆದ ವಿದ್ಯಾರ್ಥಿಗಳನ್ನು ಪರಿಚಯಿಸಿದರು.
ಸುದ್ದಿ ಬಿಡುಗಡೆ ಕಚೇರಿ ವ್ಯವಸ್ಥಾಪಕಾ ಯಶ್ವಿತ್ ಕಾಳಂಮನೆ ಸ್ವಾಗತಿಸಿ, ಚೈತ್ರ ಮುಳ್ಯ ಪ್ರಾರ್ಥಿಸಿದರು.
ಕಾರ್ಯದರ್ಶಿ ಗಣೇಶ್ ಕುಕ್ಕುದಡಿ ವಂದಿಸಿದರು.ಕೆಜೆಯು ಮಾಜಿ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ‌ ನಿರೂಪಿಸಿದರು.

ವಿದ್ಯಾರ್ಥಿಗಳಿಗೆ ಪುರಸ್ಕಾರ


ಈ ಬಾರಿಯ ಎಸ್ ಎಸ್.ಎಲ್.ಸಿ.ಪರೀಕ್ಷೆಯ ತುಳು ಭಾಷಾ ವಿಷಯದಲ್ಲಿ ಶೇ.100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಚೆನ್ನೆಮಣೆ ಸೇರಿದಂತೆ ವಿವಿಧ ಆಟಿ ಸ್ಪರ್ಧಾ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮಕ್ಕೆ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆ ಬೆಳ್ಳಾರೆ ಮತ್ತು ಕುರಲ್ ತುಳುಕೂಟ ದುಗಲಡ್ಕ ಇವರು ಸಹಕಾರ ನೀಡಿದರು.