ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ
ಕರ್ನಾಟಕದ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಸುಳ್ಯ ಘಟಕ, ಹಾಗೂ ಮಹಿಳಾ ಘಟಕ, ಯುವ ಸಮಾಜ ಸೇವಾ ಸಂಘ ಸುಳ್ಯ ತಾಲೂಕು ಸಮಿತಿ ಇದರ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಆ.10ರಂದು ಸುಳ್ಯದ ಜಾನಕಿ ವೆಂಕಟ್ರಮಣ ಸಭಾಭವನ ಪರಿವಾರಕಾನದಲ್ಲಿ ನಡೆಯಲಿದೆ ಎಂದು ಆದಿದ್ರಾವಿಡ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಆ.2ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆದಿದ್ರಾವಿಡ ಸಮಾಜದ ಪ್ರಮುಖರಾದ ಚನಿಯ ಕಲ್ತಡ್ಕ, ಬಾಬು ಕೆ.ಎಂ. ಜಾಲ್ಸೂರು, ಸಂಘದ ಗೌರವಾಧ್ಯಕ್ಷ ಮೋನಪ್ಪ ರಾಜರಾಂಪುರ, ಅಧ್ಯಕ್ಷ ಬಾಲಕೃಷ್ಣ ದೊಡ್ಡೇರಿ, ಕೋಶಾಧಿಕಾರಿ ಶಿವಪ್ಪ ಕೋಡ್ತಿಲು ಮಾಹಿತಿ ನೀಡಿದರು.















ಜು.27ರಂದು ಬೂಡು ಗದ್ದೆಯಲ್ಲಿ ಕೆಸರು ಗದ್ದೆ ಕ್ರೀಡಾಕೂಟ ನಡೆದಿದೆ.
ಆ.10ರಂದು ಸಮಾಜದ ಬಂಧುಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದರು.
ಆ.10ರಂದು ಪೂರ್ವಾಹ್ನ ಶ್ರೀ ಸತ್ಯಸಾರಮಣಿ ದೈವಗಳಿಗೆ ದೀಪಬೆಳಗಿಸಲಾಗುವುದು. ಬಳಿಕ ಉದ್ಘಾಟನಾ ಸಮಾರಂಭ ನಡೆಯುವುದು. ತಾಲೂಕು ಸಮಿತಿ ಅಧ್ಯಕ್ಷ ಬಾಲಕೃಷ್ಣ ದೊಡ್ಡೇರಿ ಅಧ್ಯಕ್ಷತೆ ವಹಿಸಲಿದ್ದು, ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟನೆ ನೆರವೇರಿಸುವರು. ಮಾಜಿ ಸಚಿವ ಎಸ್.ಅಂಗಾರ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡುವರು. ಸಮಾಜದ ರಾಜ್ಯಾಧ್ಯಕ್ಷರಾದ ಗಣೇಶ್ ಪ್ರಸಾದ್ ಮುಖ್ಯ ಭಾಷಣಗಾರರಾಗಿದ್ದಾರೆ. ಚಿತ್ರನಟ ಚೇತನ್, ಎ.ಒ.ಎಲ್.ಇ. ಕಮಿಟಿ ಬಿ ಅಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ., ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಸಹಿತ ಹಲವು ಗಣ್ಯರು ಭಾಗವಹಿಸುವರು.
ರಕ್ತದಾನಿಗಳಾದ ನವೀನ್ ಎಲಿಮಲೆ, ವಿಜಯ ಆಲಡ್ಕ, ನಿತಿನ್ ಎಲಿಮಲೆ, ಶರತ್ ಪರಿವಾರರನ್ನು ಸನ್ಮಾನಿಸಲಾಗುವುದು. ಸಹಕಾರಿಕ್ಷೇತ್ರದ ನಿರ್ದೇಶಕರಾಗಿ ಆಯ್ಕೆಯಾದ ಸಮಾಜದ ಬಂಧುಗಳನ್ನು, ಶೈಕ್ಷಣಿಕ ಸಾಧಕರನ್ನು ಗೌರವಿಸಲಾಗುವುದು ಎಂದು ವಿವರ ನೀಡಿದರು.










