ಅಜೀಜ್ ಪೆಲ್ತಡ್ಕ ಡಿಜಿಎಂ ಆಗಿ ಪದನ್ನೋತಿ

0


ಸೌದಿ ಅರೇಬಿಯಾ ದ ಪ್ರತಿಷ್ಠಿತ ಲೆರ್ಸನ್ ತೊಬ್ರೊ ಹೈಡ್ರೊ ಕಾರ್ಬೆನ್ ಸಮೂಹ ಸಂಸ್ಥೆಗಳ ಹಿರಿಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ಪದೋನ್ನತಿ ಹೊಂದಿದ ಹಿರಿಯ ಉದ್ಯಮಿ ಅಜೀಜ್ ಪೆಲ್ತಡ್ಕ ಅವರನ್ನು ನೇಮಕ ಗೊಳಿಸಿದ್ದಾರೆ.ಅವರು ಸುಳ್ಯದಲ್ಲಿ ಮನೆ ಹೊಂದಿದ್ದು ಅರಂತೋಡು ಮತ್ತು ಗೂನಡ್ಕ ಪರಿಸರ ಜನರಿಗೆ ಪ್ರೀತಿಪಾತ್ರ ರಾಗಿದ್ದಾರೆ.

ಇವರು ಸಾಮಾಜಿಕ ಮುಂದಾಳು ಅರಂತೋಡು ಜಮಾಅತ್ ಸೌದಿ ಸಮಿತಿಯ ಅಧ್ಯಕ್ಷರು ಹಾಗು ಮೋಳುಮ್ಮ ಚಾರಿಟೇಬಲ್ ಟ್ರಸ್ಟ್ ನ ಅದ್ಯಕ್ಷರು ಆಗಿದ್ದಾರೆ.ಇವರ ಆಯ್ಕೆಗೆ ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಆಡಳಿತ ಮಂಡಳಿ ಹಾಗೂ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ಸಮಿತಿ ಅಭಿನಂದನೆ ಸಲ್ಲಿಸಿದ್ದಾರೆ.