ಜಟ್ಟಿಪಳ್ಳ: ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಬಿಡುಗಡೆ

0

ಶ್ರೀ ರಾಮ ಭಜನಾ ಸೇವಾ ಸಂಘ ಜಟ್ಟಿಪಳ್ಳ, ಸುಳ್ಯ ಇದರ ಆಶ್ರಯದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರ ಇಂದು ಬೆಳಗ್ಗೆ ಜಟ್ಟಿಪಳ್ಳದ ಶ್ರೀ ಚೆನ್ನಕೇಶವ ದೇವರ ವಸಂತ ಕಟ್ಟೆಯಲ್ಲಿ ನೆರವೇರಿತು.


ಸಂಘದ ಅಧ್ಯಕ್ಷರಾದ sಎಸ್.ಆರ್.ಒ. ಹರಿಶ್ಚಂದ್ರ ಯಂ. ಆರ್.ರವರು ದೀಪ ಬೆಳಗಿಸಿ ಬಿಡುಗಡೆ ಮಾಡಿದರು. ಸಂಘದ, ಉಪಾಧ್ಯಕ್ಷರಾದ ರಮಾನಂದ.ರೈ, ಕಾರ್ಯದರ್ಶಿ ರಘುನಾಥ್ ಜಟ್ಟಿಪಳ್ಳ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ, ಕಪಿಲ ಯುವಕ ಮಂಡಲದ ಅಧ್ಯಕ್ಷರಾದ ಭಾನುಪ್ರಕಾಶ್, ಉಪಾಧ್ಯಕ್ಷ ವಿಪಿನ್ ಕರ್ಕೇರ, ಕಾರ್ಯದರ್ಶಿ ಕೌಶಿಕ್ ಕಾನತ್ತಿಲ, ಕೋಶಾಧಿಕಾರಿ ಚಂದ್ರಹಾಸ ಎನ್. ಯಸ್. ಗೌರವ ಸಲಹೆಗಾರ ಚೇತನ್ ಜಟ್ಟಿಪಳ್ಳ, ಮತ್ತು ನ್ಯಾಯವಾದಿ ನಾರಾಯಣ ಜಟ್ಟಿಪಳ್ಳ ಮತ್ತು ಕೃಷ್ಣ ಜಟ್ಟಿಪಳ್ಳ ಉಪಸ್ಥಿತರಿದ್ದರು.