ಶಾಸಕಿ ಭಾಗೀರಥಿ ಮುರುಳ್ಯ ಮತ್ತು ಅಧಿಕಾರಿಗಳು ಸುದ್ದಿ ಸ್ಟುಡಿಯೋದಲ್ಲಿದ್ದು ಕೃಷಿಕರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ
ನೀವೂ ಫೋನಾಯಿಸಿ ಉತ್ತರ ಪಡೆಯಿರಿ
















ಇಂದು ಸಂಜೆ ಸುದ್ದಿ ಚಾನೆಲ್ ನಲ್ಲಿ ನಡೆಯುವ ಕರೆಂಟ್ ಇವೆಂಟ್ ಕಾರ್ಯಕ್ರಮದಲ್ಲಿ , ಇತ್ತೀಚಿನ ದಿನಗಳಲ್ಲಿ ತಾಲೂಕಿನಾದ್ಯಂತ ಕಾಡಾನೆಯ ಹಾವಳಿ ಹೆಚ್ಚುತ್ತಿರುವ ಕುರಿತು ಚರ್ಚೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ಭಾಗವಹಿಸಲಿದ್ದು, ಕೃಷಿಕರ ಅಹವಾಲುಗಳಿಗೆ ಕಿವಿಯಾಗಲಿದ್ದಾರೆ. ಜತೆಗೆ ಅರಣ್ಯಾಧಿಕಾರಿಗಳೂ ಚರ್ಚಾ ಪ್ಯಾನೆಲ್ ನಲ್ಲಿ ಇರಲಿದ್ದು ಜನರು ಆನೆಗಳು ಅಥವಾ ಇತರ ಕಾಡುಪ್ರಾಣಿಗಳಿಂದ ತಮಗೆ, ತಮ್ಮ ಮನೆಯವರಿಗೆ ಅಥವಾ ತಮ್ಮ ಕೃಷಿಗೆ ಆಗಿರುವ ಹಾನಿಗಳ ಕುರಿತು ಮತ್ತು ಸಿಗಬೇಕಾಗಿರುವ ಪರಿಹಾರದ ಬಗ್ಗೆ ಹೇಳಿಕೊಳ್ಳಬಹುದಾಗಿದೆ.

ಸರಕಾರ, ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಏನು ಮಾಡಬೇಕೆಂಬ ಕುರಿತು ಸಲಹೆ ನೀಡಬಹುದಾಗಿದೆ.
ಇಂದು ಸಂಜೆ 4 ಗಂಟೆಯಿಂದ 5.30 ರ ವರೆಗೆ ಈ ನೇರಪ್ರಸಾರ ಕಾರ್ಯಕ್ರಮ ನಡೆಯಲಿದ್ದು ಜನರು ಸುದ್ದಿ ಪತ್ರಿಕೆಯಲ್ಲಿ ನೀಡಿರುವ ಅಥವಾ ಇಲ್ಲಿ ನೀಡಿರುವ ನಂಬರಿಗೆ ಕರೆ ಮಾಡಬೇಕೆಂದು ವಿನಂತಿಸಲಾಗಿದೆ.










