ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ಹೋಬಳಿ ಘಟಕವು ಹಮ್ಮಿಕೊಂಡಿರುವ “ಚಿಣ್ಣರೊಂದಿಗೆ ಚಿಲಿಪಿಲಿ ಗಾನ – ಕತಾ -ಯಾನ” ಸರಣಿ ಕಾರ್ಯಕ್ರಮದ ಎಂಟನೇ ಕಾರ್ಯಕ್ರಮವು ಆ. 2 ರಂದು ಜಯನಗರದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.















ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಕಾರ್ಯಕ್ರಮದ ಔಚಿತ್ಯವನ್ನು ವಿವರಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾವನಾ ಸಂಗೀತ ಶಾಲೆಯ ಸಂಚಾಲಕ ಕೆ.ಆರ್. ಗೋಪಾಲಕೃಷ್ಣ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ ಮಮತಾ ರವೀಶ್ ಭಾಗವಹಿಸಿ ಮಕ್ಕಳಿಗೆ ಹಾಡು ಕತೆಗಳನ್ನು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಶ್ರೀಮತಿ ಮಮತಾ ಎಸ್.ಕೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ವೀಣಾ ಕೆ ವಂದಿಸಿದರು. ಸಹ ಶ್ರೀಮತಿ ಶಿಕ್ಷಕಿಯರಾದ ನಳಿನಾಕ್ಷಿ, ಶ್ರೀಮತಿ ಅಶ್ವಿನಿ, ಶ್ರೀಮತಿ ಭಾರತಿ ಹಾಗೂ ಶ್ರೀಮತಿ ರಂಸೀನಾ ಸಹಕರಿಸಿದರು.










