ಯಕ್ಷ ದ್ರುವ ಪಟ್ಲ ಪೌಂಡೇಶನ್ ಸುಳ್ಯ ಘಟಕದ ವತಿಯಿಂದ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ಶಾಲೆ ಬಾಳಿಲದಲ್ಲಿ ಯಕ್ಷ ದ್ರುವ ಯಕ್ಷಶಿಕ್ಷಣ ಕಾರ್ಯಕ್ರಮ ಉದ್ಘಾಟನೆಗೊಂಡಿತು.ಕಾರ್ಯಕ್ರಮದಲ್ಲಿ ಯಕ್ಷದ್ರುವ ಪಟ್ಲ ಪೌಂಡೇಶನ್ ಸುಳ್ಯ ಘಟಕದ ಅಧ್ಯಕ್ಷರಾದ ಪ್ರೀತಂ ರೈ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ವ್ಯಕ್ತಿಯೊಬ್ಬನಿಗೆ ಮುಂದೆ ಗುರಿ ಇರಬೇಕು ಹಿಂದೆ ಗುರುಯಿರಬೇಕು ಆವಾಗ ಉನ್ನತಿಯ ಸ್ಥಾನವನ್ನೇರ ಬಲ್ಲ ಎಂದು ಹೇಳಿದರು.
.ನಂತರ ಯಕ್ಷ ಗುರುಗಳಾದ ಯೋಗೀಶ್ ಶರ್ಮ ಅಳದಂಗಡಿಯವರು ಪಟ್ಲ ಸತೀಶ ಶೆಟ್ಟಿ ಯವರು ಯಕ್ಷಗಾನವನ್ನು ಉಳಿಸಿ ಬೆಳೆಸುವ ಬಗ್ಗೆ ಉತ್ತಮ ಚಿಂತನೆಯ ಮೂಲಕ ಈ ಯಕ್ಷದ್ರುವ ಯಕ್ಷಶಿಕ್ಷಣ ಎಂಬ ನೂತನ ಯೋಜನೆ ಆರಂಭಿಸಿದ್ದಾರೆ ಅದನ್ನು ತಾವೆಲ್ಲ ಉತ್ತಮ ರೀತಿಯಲ್ಲಿ ಉಪಯೋಗಿಸಿ ಅವರ ಕನಸನ್ನು ಸಾಕಾರಗೊಳಿಸೋಣವೆಂದು ಸಲಹೆಯನ್ನು ನೀಡಿದರು.















ನಂತರ ತ್ರಿವೇಣಿ ಬಾಳಿಲ ಇವರು ಪ್ರತಿಯೊಬ್ಬರೂ ಸಂಸ್ಕಾರವನ್ನು ತಿಳಿದುಕೊಂಡು ಅದನ್ನು ಪಾಲಿಸಿದಲ್ಲಿ ಸ್ವಸ್ಥ ಸಮಾಜ ನಿರ್ಮಾಣ ಮಾಡಬಹುದೆಂದು ಮನದಾಳದ ಆಶಯವನ್ನು ಬಿತ್ತರಿಸಿ ಸಂಸ್ಥೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.ಅಧ್ಯಕ್ಷ ಸ್ಥಾನ ವನ್ನಲಂಕರಿಸಿದ ಶ್ರೀಮತಿ ರಂಜಿನಿ ರವರು ನಮ್ಮ ಶಾಲೆಯ ಮಕ್ಕಳಿಗೆ ಇಂಥ ಒಂದು ಯಕ್ಷ ಶಿಕ್ಷಣ ಸಿಗುತ್ತಿರೋದು ನಮ್ಮ ಭಾಗ್ಯವೇ ಸರಿ ಎಲ್ಲಾ ಮಕ್ಕಳು ಯಕ್ಷಗಾನ ಕಲಿಯುವುದರ ಮೂಲಕ ಆ ಕಲೆಯು ಮಕ್ಕಳಿಗೆ ದಾರಿದೀಪದ ಜೊತೆಗೆ ಕಲಾಪ್ರಪಂಚವು ಅವರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲೆಂದು ಶುಭ ಹಾರೈಸಿದರು.
ಶಾಲಾ ವಾರ್ಡನ್ ಶ್ರೀಯುತ ಮಾಧವ ಉಪಸ್ಥಿತರಿದ್ದರು .
ಶ್ರೀಯುತ ಶಿವಕುಮಾರ ಶಾಲಾ ಅಧ್ಯಾಪಕರು ಸ್ವಾಗತಿಸಿ ಮತ್ತು ಶಿಕ್ಷಕಿ ಕುಮಾರಿ ಸುಜಾತ ಧನ್ಯವಾದದೊಂದಿಗೆ ಸಂಪನ್ನಗೊಂಡಿತು.










