ನೆಟ್ಟಾರು :ಅಕ್ಷಯ ಯುವಕ ಮಂಡಲದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

0

ಅಕ್ಷಯ ಯುವಕ ಮಂಡಲ ರಿ ನೆಟ್ಟಾರು ಇದರ ಆಶ್ರಯದಲ್ಲಿ ಅಕ್ಷತಾ ಮಹಿಳಾ ಮಂಡಲ ನೆಟ್ಟಾರು ಹಾಗೂ ಶಾಲಾ ಮೇಲುಸ್ತುವಾರಿ ಸಮಿತಿ ನೆಟ್ಟಾರು ಶಾಲೆ ಇವುಗಳ ಸಹಯೋಗದಲ್ಲಿ ನೆಟ್ಟಾರು ಪರಿಸರದ ಸ್ವಚ್ಛತಾ ಕಾರ್ಯಕ್ರಮ ಆಗಸ್ಟ್ 03ರಂದು ನಡೆಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಒಡಿಯೂರು ಶ್ರೀ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ಳಾರೆ ವಲಯ ಮೇಲ್ವಿಚಾರಕರಾದ ಶೀಭಾ ರೈ ಸ್ವಚ್ಛ ಪರಿಸರ ನಮ್ಮೆಲ್ಲರ ಆದ್ಯ ಕರ್ತವ್ಯ ಪ್ರಧಾನಿ ನರೇಂದ್ರ ಮೋದಿಯವರ ಕನಸು ಸ್ವಚ್ಛ ಭಾರತ ಯೋಜನೆ ಯಶಸ್ವಿಗೊಳ್ಳಲು ಅಕ್ಷಯ ಯುವಕ ಮಂಡಲದಂತಹ ಯುವಕರ ಕಾರ್ಯ ಮಹತ್ತರವಾದುದು. ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಿಮ್ಮಿಂದ ನಡೆಯಲಿ ಎಂದು ಶುಭಹಾರೈಸಿದರು.

ಒಡಿಯೂರು ಶ್ರೀ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ಳಾರೆ ಗ್ರಾಮದ ಸೇವಾನಿರತೆ ಸವಿತಾ ಮಾತನಾಡಿ ಯುವಕ ಮಂಡಲದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಇಂತಹ ಕಾರ್ಯಕ್ರಮ ಬಹಳ ಅರ್ಥಪೂರ್ಣವಾದುದು ಎಂದರು.ಯುವಕ ಮಂಡಲದ ಅಧ್ಯಕ್ಷ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ನೆಟ್ಟಾರು ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ವಸಂತ ನೆಟ್ಟಾರು, ಅಕ್ಷತಾ ಮಹಿಳಾ ಮಂಡಲ ಅಧ್ಯಕ್ಷೆ ಚಂಚಲಾಕ್ಷಿ, ಕಾರ್ಯದರ್ಶಿ ಸರಸ್ವತಿ ನೆಟ್ಟಾರು,ಮಹಿಳಾ ಮಂಡಲ ಸದಸ್ಯರು, ಯುವಕ ಮಂಡಲದ ಸದಸ್ಯರು ಹಾಗೂ ಶಾಲಾ ಎಸ್ ಡಿ ಎಂ ಸಿ ಸದಸ್ಯರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಯುವಕ ಮಂಡಲದ ಕಾರ್ಯದರ್ಶಿ ಶೈಲೇಶ್ ನೆಟ್ಟಾರು ಸ್ವಾಗತಿಸಿ ಧನ್ಯವಾದವಿತ್ತರು.