ಬಾಳಿಲ ಗ್ರಾಮ ಪಂಚಾಯತ್ ಪ್ರಥಮ ಹಂತದ ಗ್ರಾಮ ಸಭೆ

0

ಕಾಂಚೋಡು ಪೈಪ್ ಲೈನ್ ವಿಸ್ತರಣೆ ಕಾಮಗಾರಿಗೆ ಹಣ ಪಾವತಿ ಸುದೀರ್ಘ ಚರ್ಚೆ

ಬಾಳಿಲ ಗ್ರಾಮ ಪಂಚಾಯತ್ 2025-26 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪಾವನ ಜೋಗಿಬೆಟ್ಟುರವರ ಅಧ್ಯಕ್ಷತೆಯಲ್ಲಿ ಆ.05 ರಂದು ಪಂಚಾಯತ್ ಆವರಣದಲ್ಲಿ ನಡೆಯಿತು. ಯುವ ಜನ ಸೇವಾ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ನೋಡೆಲ್ ಅಧಿಕಾರಿಯಾಗಿದ್ದರು.
ಗ್ರಾಮ ಪಂಚಾಯತ್ ಪಿಡಿಒ ಶ್ರೀಮತಿ ಸರಿತಾ ಓಲ್ಗಾ ಡಿಸೋಜ ರವರು ಸ್ವಾಗತಿಸಿದರು.


ಕಾರ್ಯದರ್ಶಿ ಜಯಶೀಲ ರೈ ವರದಿ ವಾಚಿಸಿದರು. ಬಾಲಕೃಷ್ಣ ರೈ ಮರಂಗಾಲರವರು ಇಲಾಖಾಧಿಕಾರಿಗಳು ಯಾರೆಲ್ಲ ಬಂದಿದ್ದಾರೆ ಮೆಸ್ಕಾಂ ಇಲಾಖೆಯವರು ಯಾಕೆ ಬರಲಿಲ್ಲ
ಎಂದು ಕೇಳಿದರು.ಆಗ ನೋಡೆಲ್ ಅಧಿಕಾರಿಯವರು ಮೆಸ್ಕಾಂ ಇಲಾಖೆಯವರು ಬರುತ್ತಾರೆ ಬರುತ್ತೇನೆ ಎಂದು ಹೇಳಿದ್ದಾರೆ ಎಂದು ಹೇಳಿದರು.
ಆಗ ಬಾಲಕೃಷ್ಣರವರು ಮೆಸ್ಕಾಂ ಇಲಾಖೆಯವರು ಬರದೆ ಗ್ರಾಮ ಸಭೆ ಮಾಡುವುದು ಬೇಡ .ನಾವು ಕಳೆದ ಗ್ರಾಮಸಭೆಯಲ್ಲಿ ಹೇಳಿದ ನಿರ್ಣಯವಾದ ಕೆಲಸಗಳು ಯಾವುದೂ ಆಗಲಿಲ್ಲ ಎಂದು ಹೇಳಿದರು.


ಹಾಗಾದರೆ ಕಳೆದ ಗ್ರಾಮ ಸಭೆಯ ನಿರ್ಣಯಕ್ಕೆ ಬೆಲೆ ಇಲ್ವ ಎಂದು ಕೇಳಿದರು. ಆಗ ನೋಡೆಲ್ ಅಧಿಕಾರಿ ಬೆಲೆ ಇದೆ.ಮೆಸ್ಕಾಂ ನವರು ಈಗ ಬರುತ್ತಾರೆ.ಪಿಡಬ್ಲ್ಯುಡಿ ಯವರು ಬರುವುದಿಲ್ಲ ಎಂದು ತಿಳಿಸಿದ್ದಾರೆ.ಏನಾದರು ಸಮಸ್ಯೆಗಳಿದ್ದರೆ ಬರೆದು ಕಳುಹಿಸಲು ಹೇಳಿದ್ದಾರೆ ಎಂದು ನೋಡೆಲ್ ಹೇಳಿದರು.
ಪಿಡಿಒರವರು ಕೂಡ ಮೆಸ್ಕಾಂ ನವರು ಬರುತ್ತಾರೆ.ಅಲ್ಲಿಯವರಿಗೆ ವರದಿ ಬಗ್ಗೆ ಕೇಳಿ ಎಂದು ಹೇಳಿದರು.
ಆಗ ಕೌಶಿಕ್ ಮತ್ತಿತತರರು ಬೇರೆ ಯಾವ ಇಲಾಖೆಯವರೆಲ್ಲ ಇದ್ದಾರೆ ಎಂದು ಕೇಳಿದರು.ಇದಕ್ಕೆ ಕಾರ್ಯದರ್ಶಿಯವರು ಗ್ರಾಮ ಸಭೆಗೆ ಬಂದಿರುವ ಇಲಾಖೆಯವರ ಮಾಹಿತಿ ನೀಡಿದರು.


ಅಷ್ಟರಲ್ಲಿ ಮೆಸ್ಕಾಂ ಇಲಾಖೆಯ ಜೆ.ಇ.ಗ್ರಾಮ ಸಭೆಗೆ ಆಗಮಿಸಿದರು. ಆಗ ಇಲಾಖಾಧಿಕಾರಿಗಳ ಬಗ್ಗೆ ನಡೆಯುತ್ತಿದ್ದ ಚರ್ಚೆ ಕೊನೆಗೊಂಡಿತು.
ಬಳಿಕ ವರದಿಯಲ್ಲಿ ವಡ್ಯ ವಿಘ್ನೇಶ್ವರ ಭಟ್ ಇವರ ಮನೆಗೆ ನೀರಿನ ಪೈಪ್ ಲೈನ್ ಕಾಮಗಾರಿ ವಿಸ್ತರಣೆ ಬಗ್ಗೆ 49,903 ಎಂದು ಇದೆ.ಇದು ಹೇಗೆ ಪಾವತಿ ಮಾಡಿದ್ದು ಕಳೆದ ಗ್ರಾಮ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿ ಹಣ ಪಾವತಿಸಬಾರದು ಎಂದು ನಿರ್ಣಯವಾಗಿತ್ತು.
ಆದರೆ ನೀವು ಯಾಕೆ ಪಾವತಿ ಮಾಡಿದ್ದು ಎಂದು ಬಾಲಕೃಷ್ಣ ಮರಂಗಾಲ ಕೇಳಿದರು.ಇದಕ್ಕೆ ಕೌಶಿಕ್ ಕೊಡಪಾಲ ಕೂಡ ಧ್ವನಿಗೂಡಿಸಿ ಕಳೆದ ವರ್ಷ ಮಾಡಿದ ನಿರ್ಣಯಕ್ಕೆ ಬೆಲೆ ಇಲ್ವ ಎಂದು ಕೇಳಿದರು.

ಆಗ ಪಿಡಿಒ ರವರು ಮತ್ತು ಉಪಾಧ್ಯಕ್ಷ ರಮೇಶ್ ರೈಯವರು ಆದ ಕಾಮಗಾರಿಗೆ ಹಣ ಪಾವತಿಯಾಗಿದೆ ಎಂದು ಹೇಳಿದರು.
ಆಗ ಕೌಶಿಕ್ ರವರು ಕಳೆದ ಬಾರಿ ಎಲ್ಲ ಗ್ರಾಮಸ್ಥರು ಹೇಳಿದ ನಿರ್ಣಯ ಅದನ್ನು ಯಾಕೆ ಗಾಳಿಗೆ ತೂರಿದ್ದೀರಿ ನಮಗೆ ಗ್ರಾಮ ಸಭೆ ಯಾಕೆ? ಎಂದು ಕೇಳಿದರು.
ಆಗ ಸದಸ್ಯೆ ಸರಸ್ವತಿ ಕಾಮತ್ ರವರು ಯಾರಿಗೆ ಪೇಮೆಂಟ್ ಆಗಿದೆ ಅದನ್ನು ಅವರು ರಿಟರ್ನ್ ಮಾಡಲಿ ಎಂದು ಹೇಳಿದರು.
ಆಗ ನೋಡೆಲ್ ಅದು ತಪ್ಪಾಗಿ ಹೋಗಿದೆ ಎಂದು ಹೇಳಿದರು. ಆಗ ತಪ್ಪು ಮಾಡಿದ್ದು ಯಾರು? 50,000 ಕೊಡುವುದು ಯಾರು?ಎಂದು ಕೌಶಿಕ್ ಕೇಳಿದರು.
ಆಗ ಪಿಡಿಒ ರವರು ಅದು ಕುಡಿಯುವ ನೀರಿನ ಕನೆಕ್ಷನ್ ಗಾಗಿ ಅವರು 1,500 ಪಂಚಾಯತ್ ಗೆ ಪಾವತಿಸಿದ್ದರು.
ಅವರಿಗೆ ಜೆ.ಜೆ.ಎಂ ನವರು ನೀರಿನ ಕನೆಕ್ಷನ್ ಕೊಟ್ಟಿರಲಿಲ್ಲ .

ಅವರು ಪಂಚಾಯತ್ ಗೆ ಆಗಾಗ ಬಂದು ಕೇಳುತ್ತಿದ್ದರು.ಈ ಬಗ್ಗೆ ಅವರು ಕೋರ್ಟಿಗೂ ಹೋಗಿದ್ದಾರೆ ಎಂದು ಹೇಳಿದರು.
ಆಗ ರಾಧಾಕೃಷ್ಣ ರಾವ್ ರವರು ಕೋರ್ಟಿಗೂ ಹಣ ಹಾಕಿದಕ್ಕೂ ಯಾವುದೇ ಸಂಬಂಧವಿಲ್ಲ. ಅವರು ನೀರು ವ್ಯವಸ್ಥೆ ಆಗಿಲ್ಲ ಎಂದು ಪಂಚಾಯತ್ ವಿರುದ್ದ ಕೋರ್ಟಿಗೆ ಹೋದದ್ದು ಎಂದು ಹೇಳಿದರು.
ಆಗ ಉಪಾಧ್ಯಕ್ಷ ರಮೇಶ್ ರೈ ಯವರು ಅನಿವಾರ್ಯತೆಯಲ್ಲಿ ಕಾಂಟ್ರಾಕ್ಟರ್ ಗೆ ಹಣ ಪಾವತಿ ಮಾಡಲಾಗಿದೆ ಆಗ ಹಿಂದಿನ ಪಿಡಿಒ ಇದ್ದರು ಎಂದು ಹೇಳಿದರು.
ಸದಸ್ಯ ರವೀಂದ್ರ ರೈ ಟಪ್ಪಾಲುಕಟ್ಟೆ,ಹರ್ಷ ಜೋಗಿಬೆಟ್ಟುರವರು ,ಪಾವನ ಜೋಗಿಬೆಟ್ಟುರವರು ಮಾತನಾಡಿದರು.
ಈ ಬಗ್ಗೆ ಗಂಟೆಗಟ್ಟಲೆ ಚರ್ಚೆಗಳು ನಡೆದವು.
ಶ್ರೀನಾಥ ರೈಯವರು ಅವರು ಪಂಚಾಯತ್ ಗೆ ನೀರಿನ ಕನೆಕ್ಷನ್ ಗೆ ಹಣ ಪಾವತಿ ಮಾಡಿದ್ದು ಹೌದು ಆದರೆ ಅವರಿಗೆ ನೀರಿನ ಮೂಲ ಬೇರೆ ಇದೆ.ನೈಸರ್ಗಿಕವಾದ ನೀರಿನ ವ್ಯವಸ್ಥೆ ಇದೆ.ಹೀಗಿರುವಾಗ ಅವರು ಕೇಳುವುದು ಕೂಡ ತಪ್ಪು ಎಂದು ಹೇಳಿದರು.
ಕೆಲಹೊತ್ತು ಚರ್ಚೆ ನಡೆದ ಬಳಿಕ ಆರು ತಿಂಗಳ ಒಳಗೆ ಮುಂದಿನ ಗ್ರಾಮ ಸಭೆಯ ಮೊದಲು 49,903 ರೂ.ರಿಕವರಿ ಮಾಡುವಂತೆ ಪಂಚಾಯತ್ ನಿಂದ ನಿರ್ಣಯ ಕೈಗೊಳ್ಳಲಾಯಿತು.

ಬಳಿಕ ರಸ್ತೆ,ವಿದ್ಯುತ್ ಸಮಸ್ಯೆ,ಸ್ವಚ್ಛತೆ ಹಾಗು ಇನ್ನಿತರ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು. ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.
ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಮೇಶ್ ರೈ, ಸದಸ್ಯರು ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಸದಸ್ಯ ರವೀಂದ್ರ ರೈ ಟಪ್ಪಾಲುಕಟ್ಟೆ ವಂದಿಸಿದರು.