














ಶ್ರೀ ರಾಜರಾಜೇಶ್ವರಿ ದೇವಸ್ಥಾನ ಗೌರಿಪುರಂ ಬೆಳ್ಳಾರೆ ಇದರ ಮಾತೃಮಂಡಳಿಯ ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ ಆ. 8ರಂದು ಸಂಜೆ 4.00 ಗಂಟೆಯಿಂದ ದೇವಸ್ಥಾನದಲ್ಲಿ ನಡೆಯಲಿದೆ.
ಸೇವೆಯಲ್ಲಿ ಭಾಗವಹಿಸುವ ಮಾತೆಯರು 1 ಹರಿವಾಣ, ಕಲಶ ತಂಬಿಗೆ, 1 ತೆಂಗಿನಕಾಯಿ, 2 ವೀಳ್ಯದೆಲೆ, 1 ಅಡಿಕೆ, 1 ರೂ. ನಾಣ್ಯ, ಅರ್ಚನೆಗೆ ಹೂ, ತುಳಸಿಯೊಂದಿಗೆ ಸೇವಾದಾರರು ರೂ. 150/-ಪಾವತಿಸಿ 15 ನಿಮಿಷ ಮುಂಚಿತವಾಗಿ ಆಗಮಿಸಬೇಕು. ಅಕ್ಕಿ ದೇವಸ್ಥಾನದಿಂದ ನೀಡಲಾಗುವುದು ಎಂದು ಮಾತೃಮಂಡಳಿಯ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಆನಂದ ಗೌಡ ಪಡ್ಪು ತಿಳಿಸಿದ್ದಾರೆ.



