ಕೊಯನಾಡು ಬಳಿ ಕಾರು – ಬೊಲೆರೋ ಮುಖಾಮುಖಿ ಡಿಕ್ಕಿ, ಪ್ರಯಾಣಿಕರು ಅಪಾಯದಿಂದ ಪಾರು – ವಾಹನಗಳು ಜಖಂ

0

ಕೊಯನಾಡಿನ ಚಡಾವು ಬಳಿ ಮಾರುತಿ 800 ಕಾರು ಮತ್ತು ಬೊಲೆರೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಆ.6 ರಂದು ಸಂಭವಿಸಿದೆ.

ಕೊಯನಾಡಿನಿಂದ ಸಂಪಾಜೆ ಕಡೆ ಬರುತ್ತಿದ್ದ 800 ಕಾರು ಹಾಗೂ ಮಡಿಕೇರಿ ಕಡೆಗೆ ಹೋಗುತ್ತಿದ್ದ ಬೊಲೆರೋ ನಡುವೆ ಚಡಾವಿನ ತಿರುವಿನ ಬಳಿ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮವಾಗಿ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು , ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ವಾಹನಗಳೆರಡು ಜಖಂ ಗೊಂಡಿದೆ.