ನಿವೃತ್ತಿಗೊಂಡ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ ಮನೆಯವರಿಗೆ ಸನ್ಮಾನ









ಸುಳ್ಯದ ಸಿ.ಎ ಬ್ಯಾಂಕ್ ನ ಸಭಾಭವನದಲ್ಲಿ ಸುಳ್ಯ ತಾಲೂಕು ಪ್ರಾ.ಕೃ.ಪ.ಸ.ಸಂಘಗಳ ಕಾರ್ಯನಿರ್ವಹಣಾಧಿಕಾರಿಗಳ 20 ಅಂಶಗಳ ಸಭೆ ಆ.6 ರಂದು ನಡೆಯಿತು.

ಈ ಸಂದರ್ಭ ಇತ್ತೀಚೆಗೆ ನಿವೃತ್ತಿಗೊಂಡ ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ ಮನೆ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಡಿ.ಸಿ.ಸಿ ಬ್ಯಾಂಕ್ ಸುಳ್ಯ ತಾಲೂಕು ಪ್ರತಿನಿಧಿಗಳ ಪರವಾಗಿ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಸನ್ಮಾನಿಸಿದರು. ಈ ಸಂದರ್ಭ ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಡಾl ಸೋಮಶೇಖರ್ ಕಟ್ಟೆಮನೆ, ಹಾಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬೆಳ್ಯಪ್ಪ ಗೌಡ ಮಣಿಯಾನ ಮನೆ ಉಪಸ್ಥಿತರಿದ್ದರು.










