ಬೆಳ್ಳಾರೆಯ ಶಾಹಿನ್ ಮಾಲ್ ನಲ್ಲಿ ಶಿಲ್ಪಾ ಜ್ಯುವೆಲ್ಲರ್ಸ್ ಶುಭಾರಂಭ

0

ಶ್ರೀಮತಿ ಶಿಲ್ಪಾ ಪ್ರಶಾಂತ್ ಮತ್ತು ಕೆ.ಎಸ್. ಪ್ರಶಾಂತ್ ಕುಮಾರ್ ಮಾಲೀಕತ್ವದ ಚಿನ್ನ, ಬೆಳ್ಳಿ, ವಜ್ರ ಆಭರಣಗಳ ಮಳಿಗೆ ಶಿಲ್ಪಾ ಜ್ಯುವೆಲ್ಲರ್ಸ್ ಆ. 8ರಂದು ಬೆಳ್ಳಾರೆಯ ಮೇಲಿನ ಪೇಟೆಯ ಶಾಹಿನ್ ಮಾಲ್ ನಲ್ಲಿ ಶುಭಾರಂಭಗೊಮಡಿತು. ಶಾಹಿನ್ ಮಾಲ್ ಮಾಲಕರಾದ ಎಸ್.ಎಂ. ಅಬ್ದುಲ್ ಹಮೀದ್ ಹಾಜಿ ರಿಬ್ಬನ್ ಕತ್ತರಿಸಿದರೆ, ಪ್ರಶಾಂತ್ ಕುಮಾರ್ ರ ತಾಯಿ ಶ್ರೀಮತಿ ಸರೋಜಿನಿ ಸದಾಶಿವ ಆಚಾರ್ಯ ಕಡಬ ದೀಪ ಪ್ರಜ್ವಲನೆ ಮಾಡಿ ಮಳಿಗೆಯನ್ನು ಉದ್ಘಾಟಿಸಿದರು.

ಪ್ರಶಾಂತ್ ಕುಮಾರ್ ರ ಸಹೋದರರಾದ ಲ. ದಿನೇಶ್ ಆಚಾರ್, ಸಂತೋಷ್ ಆಚಾರ್, ರಾಜಧಾನಿ ಜ್ಯುವೆಲ್ಲರ್ಸ್ ಮಾಲಕರಾದ ರಝಾಕ್, ನ್ಯೂ ಪ್ರಗತಿ ಟ್ರೇಡರ್ಸ್ ಮಾಲಕರಾದ ಮಂಗಳ ಅಬೂಬಕ್ಕರ್ ಮತ್ತು ಮೆಹಮ್ಮೂದ್ ಬೆಳ್ಳಾರೆ, ಸುಪ್ರಭ ಜ್ಯುವೆಲ್ಲರ್ಸ್ ಮಾಲಕರಾದ ಸತ್ಯನಾರಾಯಣ ಆಚಾರ್ಯ ಬೆಳ್ಳಾರೆ, ಶ್ರೀಮತಿ ಶಿಲ್ಪ ಆಚಾರ್ಯರ ತಂದೆ ದಾಮೋದರ ಆಚಾರ್ಯ, ಬೆಳ್ಳಾರೆ ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕಿ ಶ್ರೀಮತಿ ಭಾರತಿ, ವಿಜಯಾ ಬ್ಯಾಂಕ್‌ ಮಾಜಿ ಸಿಬ್ಬಂದಿ ಶ್ಯಾಮಸುಂದರ ರೈ ಸೇರಿದಂತೆ ಅನೇಕ ಗಣ್ಯರು, ಪ್ರಶಾಂತ್ ಆಚಾರ್ಯರ ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.