ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋತೆರಪಿಯಲ್ಲಿ ಪದವಿ ಪ್ರದಾನ ಸಮಾರಂಭ -2025

0

ಗುರುಗಳನ್ನು, ಹಿರಿಯರನ್ನು ಗೌರವಿಸಿ – ಡಾ. ಮುರಳೀಧರ್

ನೀವು ನಿಮ್ಮ ಗುರುಗಳನ್ನು, ಪೋಷಕರನ್ನು ಮತ್ತು ಹಿರಿಯರನ್ನು ಗೌರವಿಸಿ. ಆಗ ನಿಮ್ಮ ವಿದ್ಯೆಗೆ ಬೆಲೆ ಬರುತ್ತದೆ. ಫಿಸಿಯೋತೆರಪಿ ಶಿಕ್ಷಣಕ್ಕೆ ಜಗತ್ತಿನಾದ್ಯಂತ ಉದ್ಯೋಗಾವಕಾಶವಿದೆ ಎಂದು ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ, ಜ್ಯುಪಿಟರ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ನ ಅಧ್ಯಕ್ಷ ಡಾ. ಮುರಳೀಧರ್ ಹೇಳಿದರು. ಅವರು ಆ. 07ರಂದು ಕೆವಿಜಿ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋತೆರಪಿ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಹಾಗೂ ವೈದ್ಯಕೀಯ ನಿರ್ದೇಶಕರಾದ ಡಾ. ಕೆ.ವಿ ಚಿದಾನಂದ ಮಾತನಾಡಿ ಫಿಸಿಯೋಥೆರಪಿಗೆ ಉತ್ತಮ ಭವಿಷ್ಯವಿದೆ, ಎಲ್ಲಾ ವೈದ್ಯಕೀಯ ವಿಭಾಗದಲ್ಲಿಯೂ ಅವಕಾಶ ಕಲ್ಪಿಸುತ್ತದೆ ಎಂದು ಹೇಳಿ ಶುಭ ಹಾರೈಸಿದರು. ಎಒಎಲ್ಇ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ, ಕಾರ್ಯದರ್ಶಿ ಐಶ್ವರ್ಯ ಕೆ.ಸಿ. ಕಾಲೇಜಿನ ಡೀನ್ ಡಾ. ನೀಲಾಂಬಿಕೈ ನಟರಾಜನ್, ಮೆಡಿಕಲ್ ಸೂಪರಿಂಟೆಂಡೆಂಟ್ ಪ್ರೊ. ಡಾ. ಸಿ.ಆರ್. ಭಟ್, ಫಿಸಿಯೋತೆರಪಿ ಪ್ರಾಂಶುಪಾಲರಾದ ಡಾ. ಮಧು ವೇಬಾಕ್, ಪಿಸಿಯೋತೆರಪಿ ವಿಭಾಗದ ಆಡಳಿತಾಧಿಕಾರಿ ಡಾ. ಅಪೂರ್ವ ದೊರೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದ್ವಿತೀಯ ಬಿ.ಪಿ.ಟಿ ವಿದ್ಯಾರ್ಥಿನಿಯರಾದ ರಕ್ಷಾ, ರೋಜಶ್ರೀ, ನಿತ್ಯಶ್ರೀ ಪ್ರಾರ್ಥಿಸಿದರು.

ಪ್ರಾಂಶುಪಾಲರಾದ ಡಾ. ಮಧು ವೆಬಾಕು ಸ್ವಾಗತಿಸಿದರು. ಪಿ.ಟಿ.ಟಿ ಸಾಯಿರಾಂ ಪ್ರತಿಜ್ಞಾ ವಿಧಿ ಬೋಧಿಸಿದರು. ಅಪೂರ್ವ ದೊರೆ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪೆತಾಲಜಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಅಂಜಲಿ ರಾವ್ ಮತ್ತು ಫಿಸಿಯೋತೆರಪಿ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಶಾಶ್ವತಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಪೋಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಉಪಸ್ಥಿತರಿದ್ದರು.