ಕೋನಡ್ಕ ಪದವು ಅಂಗನವಾಡಿ ಕೇಂದ್ರದಲ್ಲಿ ಸ್ತನ್ಯಪಾನ ಸಪ್ತಾಹದ ಮಾಹಿತಿ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮ

0


ಜಾಲ್ಸೂರು ಗ್ರಾಮದ ಕೋನಡ್ಕ ಪದವು ಅಂಗನವಾಡಿ ಕೇಂದ್ರದಲ್ಲಿ ಸ್ತನ್ಯಪಾನ ಸಪ್ತಾಹದ ಮಾಹಿತಿ ಕಾರ್ಯಕ್ರಮ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮ ಆ. ೯ರಂದು ನಡೆಯಿತು.
ಅಂಗನವಾಡಿ ಮಕ್ಕಳಿಗೆ ಶ್ರೀಮತಿ ಅವಿತಾ ಲೋಕೇಶ್ ಅವರು ಸಮವಸ್ತ್ರವನ್ನು ಕೊಡುಗೆಯಾಗಿ ನೀಡಿದರು. ಸಮುದಾಯ ಆರೋಗ್ಯ ಅಧಿಕಾರಿ ರಚನಾರವರು ಸ್ತನ್ಯಪಾನ ಸಪ್ತಾಹದ ಮಾಹಿತಿ ನೀಡಿದರು.


ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಅಕ್ಷತಾ ಬಿ.ಕೆ., ಶ್ರೀಮತಿ ರಾಧಿಕಾ ಪ್ರಕಾಶ್, ಆಶಾ ಕಾರ್ಯಕರ್ತೆ ಶ್ರೀಮತಿ ಕುಸುಮಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಕ್ಕಳ ತಾಯಂದಿರು, ಪುಟಾಣಿ ಮಕ್ಕಳು ಇದ್ದರು. ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ನಿವೇದಿತಾ ಸ್ವಾಗತಿಸಿ, ವಂದಿಸಿದರು. ಸಹಾಯಕಿ ಶಾರದಾ ಸಹಕರಿಸಿದರು.