ಅಡ್ಕಾರು : ಕಾರ್ತಿಕೇಯ ಯುವ ಸೇವಾ ಸಮಿತಿಯ 7ನೇ ವರುಷದ ಶಾರದಾಂಬೋತ್ಸವ – ನೂತನ ಸಮಿತಿ ರಚನೆ

0

ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಯುವ ಸೇವಾ ಸಮಿತಿಯ ಸಹಭಾಗಿತ್ವದಲ್ಲಿ ನಡೆಯಲಿರುವ 7ನೇ ವರುಷದ ಶಾರದಾಂಬೋತ್ಸವದ ನೂತನ ಸಮಿತಿಯನ್ನು ಇತ್ತೀಚಿಗೆ ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ಯತೀಂದ್ರ ಅಡ್ಕಾರುಬೈಲು, ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಪ್ರಸಾದ್ ಪದವು, ಪ್ರಧಾನ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಅಡ್ಕಾರು, ಕೋಶಾಧಿಕಾರಿಯಾಗಿ ಸ್ವಸ್ತಿಕ್ ಪದವು ಹಾಗೂ ಉಪಾದಕ್ಷರುಗಳು ಮತ್ತು ಇತರೆ ಸದಸ್ಯರುಗಳನ್ನು ಸರ್ವರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಗುರುರಾಜ್ ಭಟ್, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರಿಪ್ರಕಾಶ್ ಅಡ್ಕಾರು, ಕಾರ್ತಿಕೇಯ ಯುವ ಸೇವಾ ಸಮಿತಿಯ ಗೌರವ ಸಲಹೆಗಾರ ನ.ಸೀತಾರಾಮ ಜಾಲ್ಸೂರು, ಸುಧಾಕರ ಕಾಮತ್ ಅಡ್ಕಾರು, ಜಯರಾಮ ರೈ ಜಾಲ್ಸೂರು, ಡಾ. ಗೋಪಾಲಕೃಷ್ಣ ಭಟ್,ದಿನೇಶ್ ಅಡ್ಕಾರು, ಶರತ್ ಅಡ್ಕಾರು ಹಾಗೂ ಊರ ಭಕ್ತಾಧಿಗಳು ಉಪಸ್ಥಿತರಿದ್ದರು.