ಮರಳು, ಜಲ್ಲಿ ಕೆಂಪು ಕಲ್ಲು ಸರಾಗವಾಗಿ ದೊರಕಿಸಲು ಸರ್ಕಾರಕ್ಕೆ ಮನವಿ

ಕಲ್ಮಡ್ಕ ಗ್ರಾಮ ಪಂಚಾಯತ್ ನ 2025-26 ನೇ ಸಾಲಿನ ಪ್ರಥಮ ಹಂತದ ಹಂತದ ಗ್ರಾಮ ಸಭೆ ಆ.7 ರಂದು ಪಡ್ಪಿನಂಗಡಿ ನಡ್ಕ ಶಿವ ಗೌರಿ ಕಲಾಮಂದಿರದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕ್ಕಳ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ನೋಡೆಲ್ ಅಧಿಕಾರಿಯಾಗಿ ಸುಳ್ಯ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್ ಪಾಲ್ಗೊಂಡಿದ್ದರು.

ಅಂಗನವಾಡಿ ವ್ಯಾಪ್ತಿಯನ್ನು ಬಿಟ್ಟು ಬೇರೆ ಗ್ರಾಮದ ಮಕ್ಕಳ ಅನುಕೂಲದ ದೃಷ್ಟಿಯಿಂದ ಹತ್ತಿರದ ಅಂಗನವಾಡಿಗೆ ಹೋಗುವಂತೆ ಮಾಡಲು ಈ ಹಿಂದೆ ಇದ್ದ ನಿಯಮವನ್ನು ತಿದ್ದುಪಡಿ ಮಾಡಲು ಸರಕಾರಕ್ಕೆ ಬರೆದು ಕೊಳ್ಳುವಂತೆ ನಿರ್ಣಯಿಸಲಾಯಿತು.
ಗುತ್ತಿಗೆದಾರರಿಗೆ ಮತ್ತು ಸಾರ್ವಜನಿಕರಿಗೆ ಮರಳು ,ಜಲ್ಲಿ, ಕೆಂಪು ಕಲ್ಲು ಸಮಗ್ರವಾಗಿ ದೊರೆಯುವಂತೆ ಅನುಕೂಲವಾಗುವಂತೆ ಸರಕಾರಕ್ಕೆ ಮನವಿ ಮಾಡುವುದಾಗಿ ನಿರ್ಣಯಿಸಲಾಯಿತು.

ಕಲ್ಮಡ್ಕ ಗ್ರಾಮದ ಧರ್ಮಡ್ಕ ಎಂಬಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕಾಯ್ದಿರಿಸಿದ ಜಮೀನಿನ ಪಹಣಿಯನ್ನು ತಿದ್ದುಪಡಿ ಮಾಡಿಕೊಂಡು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧ ಪಟ್ಟ ಇಲಾಖೆಯವರು ಅಗತ್ಯ ಕ್ರಮ ಕೈಗೊಳ್ಳಬೇಕು. ಎಂದು ಮಾಜಿ ತಾಲೂಕು ಪಂಚಾಯತ್ ಸದಸ್ಯ ಅಬ್ದುಲ್ ಗಫೂರ್ ತಿಳಿಸಿದರು.
ಕ್ಯಾನ್ಸರ್ ನಂತಹ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ದೊರಕುವ ಔಷಧಿಗಳು ಸರಕಾರಿ ಆಸ್ಪತ್ರೆಯಲ್ಲಿ ದೊರಕುವಂತೆ ಸರ್ಕಾರಕ್ಕೆ ಮನವಿ ನೀಡುವುದಾಗಿ ನಿರ್ಣಯಿಸಲಾಯಿತು.















” ಕೃಷಿ ಇಲಾಖೆಯಿಂದ ನೀಡುವ ಸುಣ್ಣದ ಗುಣಮಟ್ಟ ಪರಿಶೀಲನೆ ನಡೆಸಬೇಕು. ಪ್ರತಿ ಕೃಷಿಕರ ಭೂಮಿಯ ಮಣ್ಣನ್ನು ಪರಿಶೀಲನೆ ಇಲಾಖೆಯ ವತಿಯಿಂದ ನಡೆಸಬೇಕು” ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಹೇಳಿದರು.
ತೋಟಗಾರಿಕೆ ಇಲಾಖೆಯಿಂದ ಕೃಷಿಕರಿಗೆ ಸಿಗುವ ಕಾಪರ್ ಸಲ್ಫೇಟ್ ಪ್ರಮಾಣ ಹೆಚ್ಚಿಸಬೇಕು. ಅದರ ಫಲಾನುಭವಿಗಳನ್ನು ಗ್ರಾಮ ಪಂಚಾಯತ್ ನಿಂದ ಗುರುತಿಸಲು ಅವಕಾಶ ನೀಡಬೇಕು ಎಂದು ಗ್ರಾಮಸ್ಥರು ಹೇಳಿದರು.
ಪಂಬೆತ್ತಾಡಿ ಗ್ರಾಮದ ಬಾಬ್ಲುಬೆಟ್ಟು ನಲ್ಲಿ ಶಿಕ್ಷಣ ಇಲಾಖೆಗೆ ಇರುವ ಖಾಲಿ ಜಾಗ ಬಗ್ಗೆ ಗ್ರಾಮ ಪಂಚಾಯತ್ ನಿಂದ ಅನೇಕ ಬಾರಿ
ಕೇಳಿದ್ದೇವೆ. ಆದರೆ ಈ ವರೆಗೂ ಯಾವುದೇ ಗಮನ ಹರಿಸಿಲ್ಲ. ಅಲ್ಲಿನ ಖಾಲಿ ಜಾಗವನ್ನು ಗುರುತಿಸಿ ಗ್ರಾಮ ಪಂಚಾಯತ್ ಗೆ ಹಸ್ತಾಂತರಿಸಿ ನಿವೇಶನ ರಹಿತರಿಗೆ ಮಂಜೂರು ಮಾಡುವಂತೆ ಸಂಬಂಧ ಪಟ್ಟ ಇಲಾಖೆಗೆ ಬರೆಯುವುದಾಗಿ ನಿರ್ಣಯಿಸಲಾಯಿತು.
ಸರಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಯು ಕೆಲವು ಫಲಾನುಭವಿಗಳಿಗೆ ಆಧಾರ್, ಪಾನ್ ಕಾರ್ಡ್ ಜೋಡಣೆ ವೇಳೆ ಲೋಪಗಳಿಂದ ದೊರಕುತ್ತಿಲ್ಲ. ಅದನ್ನು ಸರಿ ಪಡಿಸುವಂತೆ ಸಂಬಂಧ ಪಟ್ಟ ಇಲಾಖೆಗೆ ತಿಳಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕ್ಕಳ ರವರು ಗ್ರಾಮ ಪಂಚಾಯತ್ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿದ ಗ್ರಾಮಸ್ಥರಿಗೆ ಧನ್ಯವಾದ ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆಯಿಂದ ಗ್ರಾಮ ಪಂಚಾಯಿತಿಗೆ 2 ಕೋಟಿ ರೂ. ಅನುದಾನವನ್ನು ತಂದಿದ್ದು ಸಹಕರಿಸಿದ ಯು.ಟಿ.ಖಾದರ್, ಮಂಜುನಾಥ ಭಂಡಾರಿ ಯವರಿಗೆ
ಹಾಗೂ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಅಬ್ದುಲ್ ಗಫೂರ್ , ಗ್ರಾಮ ಪಂಚಾಯತ್ ಸದಸ್ಯರಾದ ಲೋಕೇಶ್ ಆಕ್ರಿಕಟ್ಟೆ ಯವರಿಗೆ ಧನ್ಯವಾದ ತಿಳಿಸಿದರು.
ಗ್ರಾಮ ಪಂಚಾಯತಿನ ಉಪಾಧ್ಯಕ್ಷೆ ಮೋಹಿನಿ ಎಂ, ಸದಸ್ಯರಾದ ಪವಿತ್ರ ಕುದ್ವ, ಜಯಲತಾ ಕೆ.ಡಿ, ಲೋಕಯ್ಯ ನಾಯ್ಕ, ಲೋಕೇಶ್ ಆಕ್ರಿಕಟ್ಟೆ, ಮೀನಾಕ್ಷಿ ಕೆ, ಹರೀಶ ಎಂ, ಹಾಜಿರಾ ಗಫೂರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೀರ್ತಿಪ್ರಸಾದ್ ಸಿ.ಎಂ. ಸ್ವಾಗತಿಸಿದರು ಮತ್ತು ವಂದಿಸಿದರು. ಕಾರ್ಯದರ್ಶಿ ಗೋಪಾಲಕೃಷ್ಣ ಕೆ. ಜಮಾ-ಖರ್ಚಿನ ವರದಿ ಮಂಡಿಸಿದರು. ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಅಬ್ದುಲ್ ಗಫೂರ್ , ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ಕೆ. ಹನೀಫ್ , ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲಾ ಮುಖ್ಯೋಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತೆಯರು, ಎ. ಯನ್. ಯಂ, ಯಚ್ ಒ , ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಮೆಸ್ಕಾಂ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿ.ಪಂ.ಇಂಜಿನಿಯರಿಂಗ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯಿಂದ ಸಿಗುವ ಸವಲತ್ತುಗಳನ್ನು ಮಾಹಿತಿ ನೀಡಿದರು.










