ಅಜ್ಜಾವರ ಗ್ರಾಮದ ವಿವೇಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರಿಗೆ ಕಾನೂನು ಮಾಹಿತಿ ಕಾರ್ಯಾಗಾರ ಹಾಗೂ ಪೋಷಕರ ಸಭೆ ಆ.9ರಂದು ನಡೆಯಿತು.

ಸುಳ್ಯ ಪೋಲೀಸ್ ಠಾಣೆಯ ಸಹಾಯಕ ಉಪ ನಿರೀಕ್ಷಕರಾದ ತಾರನಾಥ್ ರವರು ಮಕ್ಕಳ ಮೊಬೈಲ್ ಬಳಕೆ, ವಾಹನ ಚಾಲನೆ ಇತ್ಯಾದಿ ಕುರಿತು ಕಾನೂನು ಅರಿವು ನೀಡಿದರು. ಪೋಲೀಸ್ ಹೆಡ್ ಕಾನ್ ಸ್ಟೇಬಲ್ ದೇವರಾಜ್ ಕೋಲ್ಚಾರ್ ಹಾಗೂ ಸುಳ್ಯ ಸುದ್ದಿ ಬಿಡುಗಡೆ ವರದಿಗಾರ ಶಿವಪ್ರಸಾದ್ ಕೇರ್ಪಳ ಶುಭಹಾರೈಸಿದರು.















ವಿದ್ಯಾ ಸಂಸ್ಥೆಯ ಸಂಚಾಲಕರಾದ ಹಸೈನಾರ್ ಹಾಜಿ ಗೋರಡ್ಕ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯೋಪಾಧ್ಯಾಯರಾದ ಶ್ರೀಮತಿ ವೆರೋನಿಕಾ ಮಾಡ್ತಾ ಸ್ವಾಗತಿಸಿ, ಶ್ರೀಮತಿ ಬಿಂದು ಕೆ.ಎಸ್ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕರು ಮತ್ತು ಪೋಷಕರು ಉಪಸ್ಥಿತರಿದ್ದರು.










